May 20, 2026
Wednesday, May 20, 2026
spot_img

ಲೈವ್​ನಲ್ಲೇ ಅಶ್ಲೀಲ ಪದ ಬಳಸಿದ ಪಂತ್: ಟೀಮ್ ಕ್ಯಾಪ್ಟನ್ ಆಗಿ ಹೀಗಾ ಮಾತಾಡೋದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಕನಸು ಅಧಿಕೃತವಾಗಿ ಅಂತ್ಯಗೊಂಡ ಬೆನ್ನಲ್ಲೇ ನಾಯಕ ರಿಷಬ್ ಪಂತ್ ಅವರ ಪ್ರತಿಕ್ರಿಯೆ ಹೊಸ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ನಡೆದ ಸಂದರ್ಶನದಲ್ಲಿ ಪಂತ್ ಭಾವುಕರಾಗಿ ಅಸಭ್ಯ ಪದ ಬಳಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

220 ರನ್ ಕೂಡ ಸಾಕಾಗಲಿಲ್ಲ

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ತಂಡ 220 ರನ್ ಕಲೆಹಾಕಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲಿ ಗುರಿ ತಲುಪಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಲಕ್ನೋ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ:

ಸಂದರ್ಶನದಲ್ಲಿ ನಿಯಂತ್ರಣ ತಪ್ಪಿದ ಪಂತ್

ಪಂದ್ಯದ ಬಳಿಕ ನಿರೂಪಕ ಇಯಾನ್ ಬಿಷಪ್ ತಂಡದ ಪ್ರದರ್ಶನ ಕುರಿತು ಪ್ರಶ್ನಿಸಿದಾಗ ಪಂತ್ ತೀವ್ರ ಭಾವುಕರಾದರು. ತಮ್ಮ ತಂಡವನ್ನು ಸಮರ್ಥಿಸುವ ವೇಳೆ ಅವರು ‘ನಮ್ದು ಉತ್ತಮ ಫ…ಗ್ ತಂಡ’ ಎಂಬ ಪದ ಬಳಸಿದ್ದು ನೇರ ಪ್ರಸಾರದಲ್ಲೇ ಕೇಳಿಬಂದಿತು.

ಒತ್ತಡವೇ ಕಾರಣ?

₹27 ಕೋಟಿ ಮೊತ್ತಕ್ಕೆ ಖರೀದಿಯಾಗಿದ್ದ ಪಂತ್ ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸರಣಿ ಸೋಲುಗಳು, ಅಭಿಮಾನಿಗಳ ಟೀಕೆ ಹಾಗೂ ಪ್ಲೇಆಫ್ ನಿರಾಸೆ ಅವರ ಮೇಲೆ ಭಾರೀ ಒತ್ತಡ ತಂದಿದೆ ಎನ್ನಲಾಗುತ್ತಿದೆ. ಆದರೆ ನಾಯಕನಾಗಿ ತಂಡದ ಪರ ನಿಂತ ಅವರ ಭಾವುಕತೆ ಕೂಡ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !