ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ ಒಂದರಂದು ರಾಜ್ಯದಲ್ಲಿ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಉದ್ಘಾಟಿಸಲಾಗುವುದು. ನಮ್ಮ ಮುಖ್ಯಮಂತ್ರಿಗಳು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಒಂದು ಸಾವಿರ ಕೆಪಿಎಸ್ ಶಾಲೆಗಳ ಉದ್ಘಾಟನೆ ನಮ್ಮ ಕನಸು. ಇದು ನಮ್ಮ ಶಿಕ್ಷಣ ಸಾಧನೆ, ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಇಲಾಖೆಯ ಸಾಧನೆಗಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಶೇ. 62ರಷ್ಟು ಮಕ್ಕಳು ಮಾತ್ರ ಪಾಸ್ ಆಗಿದ್ದರು. ಆದರೆ ಈ ಬಾರಿ 66.5 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಮಕ್ಕಳು ಶಿಕ್ಷಕರನ್ನು ಹುಡುಕುವುದು ಬೇಕಿಲ್ಲ. ಶಿಕ್ಷಕರೇ ಮಕ್ಕಳನ್ನು ಹುಡುಕಿ ಗೊತ್ತಿಲ್ಲದನ್ನು ಹೇಳಿಕೊಡುತ್ತಾರೆ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ 19 ಕೆಪಿಎಸ್ ಶಾಲೆ, ಶಿವಮೊಗ್ಗ ಸಿಟಿಯಲ್ಲಿ ಏಳು ಪಬ್ಲಿಕ್ ಶಾಲೆಗಳು ಆರಂಭವಾಗುತ್ತದೆ. ಒಂದು ಶಾಲೆಗೆ 3.5 ಕೋಟಿ ರೂ. ಖರ್ಚಾಗುತ್ತಿದೆ ಎಂದಿದ್ದಾರೆ.



