May 23, 2026
Saturday, May 23, 2026
spot_img

ಭಾರತ-ಅಮೆರಿಕ ಬಾಂಧವ್ಯದ ಹೊಸ ಚಾಪ್ಟರ್: ಕೋಲ್ಕತ್ತಾದಲ್ಲಿ US ವಿದೇಶಾಂಗ ಕಾರ್ಯದರ್ಶಿ ರೂಬಿಯೋಗೆ ಭರ್ಜರಿ ಸ್ವಾಗತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ನಾಲ್ಕು ದಿನಗಳ ಭಾರತ ಪ್ರವಾಸದ ಅಂಗವಾಗಿ ಶನಿವಾರ ಕೋಲ್ಕತ್ತಾಗೆ ಆಗಮಿಸಿದ್ದು, ಈ ಭೇಟಿ ಭಾರತ-ಅಮೆರಿಕಾ ಸಂಬಂಧಗಳಿಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ.

2012ರ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಕೋಲ್ಕತ್ತಾಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಮೋದಿ ಭೇಟಿಗೆ ಸಿದ್ಧತೆ, ಮಹತ್ವದ ಚರ್ಚೆಗಳು

ಭಾರತ ಪ್ರವಾಸದ ವೇಳೆ ರೂಬಿಯೋ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ. ವ್ಯಾಪಾರ, ರಕ್ಷಣಾ ಸಹಕಾರ, ತಂತ್ರಜ್ಞಾನ, ಇಂಧನ ಹಾಗೂ ಕ್ವಾಡ್ ರಾಷ್ಟ್ರಗಳ ಸಹಭಾಗಿತ್ವದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ ಎಂದು ಅಮೆರಿಕಾ ರಾಯಭಾರಿ ಸೆರ್ಗಿಯೊ ಗೋರ್ ತಿಳಿಸಿದ್ದಾರೆ.

ಇದನ್ನೂ ಓದಿ:

ಮದರ್ ಹೌಸ್‌ಗೆ ಭೇಟಿ, ಮಾನವೀಯ ಸಂದೇಶ

ಕೋಲ್ಕತ್ತಾ ಪ್ರವಾಸದ ವೇಳೆ ರೂಬಿಯೋ ಮದರ್ ತೆರೇಸಾ ಸ್ಥಾಪಿಸಿದ್ದ ಮಿಷನರೀಸ್ ಆಫ್ ಚಾರಿಟಿ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಜೊತೆಗೆ ಮಕ್ಕಳ ಆಶ್ರಯ ಕೇಂದ್ರದಲ್ಲಿ ಸಮಯ ಕಳೆಯುವ ಕಾರ್ಯಕ್ರಮವೂ ನಿಗದಿಯಾಗಿದೆ. ಇದರಿಂದ ರಾಜತಾಂತ್ರಿಕ ಭೇಟಿ ಜೊತೆಗೆ ಮಾನವೀಯ ಸ್ಪರ್ಶವೂ ಗಮನ ಸೆಳೆದಿದೆ.

ಕ್ವಾಡ್ ಸಭೆಗೂ ಹೆಚ್ಚಿದ ಕುತೂಹಲ

ಮೇ 26ರಂದು ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ಭಾಗವಹಿಸಲಿವೆ. ಇದೇ ಹಿನ್ನೆಲೆ ರೂಬಿಯೋ ಭೇಟಿ ಜಾಗತಿಕ ರಾಜಕೀಯ ವಲಯದಲ್ಲೂ ಹೆಚ್ಚಿನ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !