ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾಗೆ ಇದೀಗ ಸಂಸತ್ತಿನಲ್ಲಿ ಮಹತ್ವದ ಜವಾಬ್ದಾರಿ ಲಭಿಸಿದೆ. ರಾಜ್ಯಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರಾಗಿ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯಸಭೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಸಮಿತಿ ಪುನರ್ರಚನೆ ಮಾಡಿದ ರಾಜ್ಯಸಭೆ
ರಾಜ್ಯಸಭೆಯ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಸಮಿತಿಯನ್ನು ಪುನರ್‌ರಚನೆ ಮಾಡಿ 10 ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ. ಮೇ 20ರಿಂದ ಜಾರಿಗೆ ಬರುವಂತೆ ಈ ಹೊಸ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮಿತಿಯ ಮುಖ್ಯಸ್ಥರಾಗಿ ರಾಘವ್ ಚಡ್ಡಾ ನೇಮಕಗೊಂಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಇದನ್ನೂ ಓದಿ:
ಮತ್ತೊಂದು ಮಹತ್ವದ ನೇಮಕ
ಇದೇ ವೇಳೆ ಕಾರ್ಪೊರೇಟ್ ಕಾನೂನುಗಳ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಮಿತಿಗೆ ರಾಜ್ಯಸಭಾ ಸದಸ್ಯೆ ಡಾ. ಮೇನಕಾ ಗುರುಸ್ವಾಮಿ ಅವರನ್ನು ಸದಸ್ಯೆಯಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆಗಳು ಸಂಸತ್ತಿನ ಮುಂದಿನ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿವೆ.
ಸಮಿತಿಯಲ್ಲಿ ಯಾರು ಯಾರು?
ರಾಘವ್ ಚಡ್ಡಾ ನೇತೃತ್ವದ ಸಮಿತಿಯಲ್ಲಿ ಹರ್ಷ್ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಯಂಕ್ ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್, ಜೆಬಿ ಮಾಥರ್ ಹಿಶಾಮ್, ಸುಭಾಶಿಶ್ ಖುಂಟಿಯಾ, ರುಂಗ್ವ್ರಾ ನರ್ಜಾರಿ ಹಾಗೂ ಸಂತೋಷ್ ಕುಮಾರ್ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ.



