July 8, 2026
Wednesday, July 8, 2026
spot_img

ಡಿಜಿಟಲ್ ರಾಜಕೀಯಕ್ಕೆ ಬ್ರೇಕ್: ಇಂಟರ್ನೆಟ್ ಜಿರಳೆಗಳ ‘ಕಾಕ್ರೋಚ್ ಜನತಾ ಪಾರ್ಟಿ’ ಇನ್ಸ್ಟಾ ಲಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಗಮನ ಸೆಳೆಯುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ಪಕ್ಷದ ಸಾಮಾಜಿಕ ಜಾಲತಾಣ ಖಾತೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಗುತ್ತಿದೆ ಹಾಗೂ ಹ್ಯಾಕ್ ಮಾಡಲಾಗುತ್ತಿದೆ ಎಂದು ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದು, ಇದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್ ಖಾತೆ ಲಾಕ್?

ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸಿಜೆಪಿ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಭದ್ರತಾ ಕಾರಣ ನೀಡಿ ಲಾಕ್ ಮಾಡಲಾಗಿದೆ. ಗುರುತು ಪರಿಶೀಲನೆ ಹಾಗೂ ಪಾಸ್‌ವರ್ಡ್ ಬದಲಾವಣೆ ಪ್ರಕ್ರಿಯೆ ಹಲವು ಬಾರಿ ಪ್ರಯತ್ನಿಸಿದರೂ ಖಾತೆ ಮರುಸ್ಥಾಪನೆ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಪಕ್ಷದ ಬ್ಯಾಕಪ್ ಖಾತೆಯನ್ನೂ ಕೆಲಕಾಲ ತೆಗೆದುಹಾಕಲಾಗಿದ್ದು, ಬಳಿಕ ಮತ್ತೆ ಸಕ್ರಿಯಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ:

“ಅಧಿಕೃತ ಪೋಸ್ಟ್ ಅಲ್ಲ” ಎಂದ ದೀಪ್ಕೆ

ಸಾಮಾಜಿಕ ಜಾಲತಾಣ ಪ್ರವೇಶಕ್ಕೆ ಅಡೆತಡೆ ಉಂಟಾಗಿರುವ ಕಾರಣ, ಇನ್ನು ಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್‌ಗಳನ್ನು ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬಾರದು ಎಂದು ದೀಪ್ಕೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. ಈ ಬೆಳವಣಿಗೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಜೋರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !