May 23, 2026
Saturday, May 23, 2026
spot_img

LSG vs PBKS | ‘ಸೋತ್ರೆ ಸೀದಾ ಮನೆಗೆ’: ಪ್ಲೇಆಫ್ ಉಳಿಸಿಕೊಳ್ಳಲು ಪಂಜಾಬ್‌ಗೆ ಅಗ್ನಿಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದೆ.

ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಎರಡೂ ತಂಡಗಳಿಗೆ ಲೀಗ್ ಹಂತದ ಕೊನೆಯ ಸಮರವಾಗಿದ್ದು, ವಿಶೇಷವಾಗಿ ಪಂಜಾಬ್ ಪಾಲಿಗೆ ಮಾಡು-ಇಲ್ಲವೇ-ಮಡಿ ಹೋರಾಟವಾಗಿದೆ.

ಲಕ್ನೋಗೆ ವಿದಾಯದ ಪಂದ್ಯ

ಈ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಹೀಗಾಗಿ ತಂಡಕ್ಕೆ ಇದು ಕೇವಲ ಗೌರವ ಉಳಿಸಿಕೊಳ್ಳುವ ಪಂದ್ಯವಾಗಿದೆ. ಆದರೆ ಪಂಜಾಬ್ ಕಿಂಗ್ಸ್‌ಗೆ ಗೆಲುವು ಅನಿವಾರ್ಯ. ಸೋಲು ಕಂಡರೆ ತಂಡದ ಪ್ಲೇಆಫ್ ಕನಸು ಸಂಪೂರ್ಣ ಭಗ್ನವಾಗಲಿದೆ.

ಇದನ್ನೂ ಓದಿ:

ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ

ಈ ಮಹತ್ವದ ಪಂದ್ಯದಲ್ಲಿ ಲಕ್ನೋ ತಂಡ ಎರಡು ಬದಲಾವಣೆ ಮಾಡಿದ್ದು, ಅರ್ಜುನ್ ತೆಂಡೂಲ್ಕರ್ ಮತ್ತು ಅರ್ಶಿನ್ ಕುಲಕರ್ಣಿಗೆ ಅವಕಾಶ ನೀಡಿದೆ. ಮುಂಬೈ ಇಂಡಿಯನ್ಸ್ ತೊರೆದು ಲಕ್ನೋ ಸೇರಿದ್ದ ಅರ್ಜುನ್‌ಗೆ ಕೊನೆಗೂ ಆಡುವ ಅವಕಾಶ ಸಿಕ್ಕಿದೆ.

ಪಂಜಾಬ್ ತಂಡದಲ್ಲೂ ಬದಲಾವಣೆ

ಪಂಜಾಬ್ ಕಿಂಗ್ಸ್ ಕೂಡ ತನ್ನ ಬಳಗದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ. ಮಾರ್ಕೊ ಯಾನ್ಸನ್ ಮತ್ತು ವಿಜಯ್‌ಕುಮಾರ್ ವೈಶಾಖ್ ತಂಡ ಸೇರಿಕೊಂಡಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಮಹತ್ವದ ಗೆಲುವಿನತ್ತ ಕಣ್ಣಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !