ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ನಿರಂತರ ಏರಿಳಿತ ಕಾಣಿಸುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಸ್ವಲ್ಪ ಇಳಿಕೆ ದಾಖಲಾಗಿದೆ.
ಶುಕ್ರವಾರ ಏರಿಕೆಯಾಗಿದ್ದ ದರ ಶನಿವಾರ ಮತ್ತೆ ಕಡಿಮೆಯಾಗಿದ್ದು, ಹೂಡಿಕೆದಾರರು ಹಾಗೂ ಆಭರಣ ಖರೀದಿಸುವವರಿಗೆ ತುಸು ನೆಮ್ಮದಿ ತಂದಿದೆ. ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆ ಸುಮಾರು 300 ರೂಪಾಯಿವರೆಗೆ ದರ ಇಳಿದಿರುವುದು ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲೂ ಇಳಿಕೆಯ ಪ್ರಭಾವ
ಕರ್ನಾಟಕ ಸೇರಿ ದೇಶದ ಹಲವು ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 1,45,800 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,59,060 ರೂಪಾಯಿಯಷ್ಟಿದೆ. 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 14,580 ರೂ ಆಗಿದೆ.
ಇದನ್ನೂ ಓದಿ:
ಬೆಳ್ಳಿ ದರದಲ್ಲೂ ಚಲನವಲನ
ಬೆಳ್ಳಿ ಬೆಲೆಯಲ್ಲೂ ದಿನದಿಂದ ದಿನಕ್ಕೆ ಬದಲಾವಣೆ ಕಂಡುಬರುತ್ತಿದೆ. ರಾಜ್ಯದ ಹಲವು ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ 28,500 ರೂಪಾಯಿಯಷ್ಟಿದ್ದರೆ, ತಮಿಳುನಾಡು ಮತ್ತು ಕೇರಳ ಭಾಗಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ.
ಜಾಗತಿಕ ಮಾರುಕಟ್ಟೆಯ ಪರಿಣಾಮ
ಅಮೆರಿಕ, ದುಬೈ, ಸಿಂಗಾಪುರ್ ಸೇರಿದಂತೆ ಹಲವು ದೇಶಗಳಲ್ಲೂ ಚಿನ್ನದ ದರದಲ್ಲಿ ಏರಿಳಿತ ಮುಂದುವರಿದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ, ಡಾಲರ್ ಮೌಲ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಬೆಳವಣಿಗೆಗಳು ಚಿನ್ನ-ಬೆಳ್ಳಿ ದರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



