ಹೊಸದಿಗಂತ ವರದಿ ರಾಮದುರ್ಗ:
ತಾಲೂಕಿನಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಕಷ್ಟು ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ, ಅವುಗಳ ಮೇಲೆ ದಾಳಿ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗೋವುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ರವಾನಿಸಬೇಕೆಂದು ಸ್ಥಳೀಯ ವಿಶ್ವಹಿಂದೂ ಪರಿಷತ್- ಬಜರಂಗ ದಳದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ವಿಧೇಯಕ ಸಂಖ್ಯೆ 69 ರ ಪ್ರಕಾರ ಗೋಹತ್ಯೆ ಕಾನೂನು ಬಾಹೀರವಾಗಿದ್ದರೂ ಕಣ್ಣ ಮುಂದೆಯೇ ಗೋವುಗಳ ಕಗ್ಗೊಲೆ ನಡೆಯುತ್ತಿದ್ದರೂ ಕಾನೂನು ಕೈ ಕಟ್ಟಿ ಕುಳಿತಂತಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡಬೇಕಾಗುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಸಂಗಮೇಶ ಉದಪುಡಿ ಮನವಿ ಮಾಡಿದರು.
ಇದನ್ನೂ ಓದಿ:
ವಿಶ್ವಹಿಂದೂ ಪರಿಷತ್-ಬಜರಂಗ ದಳ ಪ್ರಖಂಡ ಅಧ್ಯಕ್ಷ ಪ್ರಕಾಶ ಸೂಳಿಬಾವಿ, ಗೋರಕ್ಷಾ ಪ್ರಮುಖ ಮನೋಜ ಕಂಕಾನಿ, ಬಜರಂಗದಳ ಸಂಯೋಜಕ ಮಂಜುನಾಥ ಹಣಸಿ, ಚಿದಾನಂದ ತಾಂಬೆ, ಸಂತೋಷ ಬೆಳಗಲ, ಬಸವರಾಜ ಆರಿಬೆಂಚಿ, ಮುತ್ತಣ್ಣ ತಳವಾರ, ಸಾಗರ ಕೊರವರ, ಸೋಮಶೇಖರ ಸೊಗಲದ, ಈಶ್ವರ ವಜ್ಜರಮಟ್ಟಿ, ಡಾ ಬಸವರಾಜ ಮಾದಣ್ಣವರ, ಮಲ್ಲಿಕಾರ್ಜುನ ಭಾವಿಕಟ್ಟಿ, ಅಪ್ಪನಗೌಡ ಪಾಟೀಲ, ಪ್ರದೀಪ ಮುಕಾರಿ, ಅಜಯ ಹೂಲಿ, ಮಂಜುಳಾ ದೊಡಮನಿ ಉಪಸ್ಥಿತರಿದ್ದರು.



