May 29, 2026
Friday, May 29, 2026
spot_img

IPL | ಮತ್ತೆ ಅಬ್ಬರಿಸಿದ ವೈಭವ್‌ ಸೂರ್ಯವಂಶಿ: ಗುಜರಾತ್​​ ಗೆಲುವಿಗೆ ಬಿಗ್ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲೂ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಮತ್ತೆ ಅಬ್ಬರಿಸಿದ್ದು, 96 ರನ್​ಗಳ ನೆರವಿನಿಂದ ರಾಜಸ್ತಾನ ತಂಡ 214 ರನ್​​​ಗಳ ಸವಾಲಿನ ಮೊತ್ತ ದಾಖಲಿಸಿದೆ.

ನ್ಯೂ ಚಂಡೀಗಢ ಮಹಾರಾಜ ಯಾದವಿಂದ್ರ ಸಿಂಗ್‌ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್‌ ಗೆ ಎಂದಿನ ಆರಂಭ ಸಿಗಲಿಲ್ಲ. 9 ರನ್‌ ಗಳಿಸುವ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಹಾಗೂ ವನ್‌ಡೌನ್‌ ಬ್ಯಾಟ್ಸ್‌ಮನ್‌ ಧ್ರುವ್‌ ಜುರೇಲ್‌ ವಿಕೆಟ್‌ ಕಳೆದುಕೊಂಡಿತ್ತು.

ಮತ್ತೆ ಕೈಕೊಟ್ಟ ನಾಯಕ

ಮೂರನೇ ವಿಕೆಟ್ ಗೆ ವೈಭವ್‌ ಸೂರ್ಯವಂಶಿಗೆ ರವೀಂದ್ರ ಜಡೇಜಾ ಸಾಥ್‌ ನೀಡಿದರು. ಆದರೆ ಗಾಯದ ಕಾರಣದಿಂದ ಕೆಲ ಸಮಯ ಹೊರಗುಳಿದರು. ಈ ವೇಳೆ ಮೈದಾನಕ್ಕೆ ಇಳಿದ ನಾಯಕ ರಿಯಾನ್‌ ಪರಾಗ್‌ ಮತ್ತೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲಿಯೇ ದಸುನ್‌ ಶನಕ, ಜೋಫ್ರಾ ಆರ್ಚರ್‌ ಕೂಡ ಔಟಾಗಿದ್ದು, ರಾಜಸ್ಥಾನ ಪರಿಸ್ಥಿತಿ 12.4 ಓವರ್‌ಗಳಲ್ಲಿ 118 ರನ್‌ ಬಾರಿಸಿ ಶೋಚನೀಯವಾಗಿತ್ತು.

ವೈಭವ್‌ ಭರ್ಜರಿ ಬ್ಯಾಟಿಂಗ್

ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟ ಜಡೇಜಾ ಅವರೊಂದಿಗೆ ಕ್ರೀಸ್‌ನಲ್ಲಿದ್ದ ವೈಭವ್‌ ಸೂರ್ಯವಂಶಿ ಮತ್ತೊಮ್ಮೆ ಉತ್ತಮ ಜೊತೆಯಾಟ ನೀಡಿದರು. ಆದರೆ ಶತಕ ಬಾರಿಸುವ ಹಾದಿಯಲ್ಲಿ ವೈಭವ್‌ ಸೂರ್ಯವಂಶಿ ಮತ್ತೊಮ್ಮೆ ಕ್ಯಾಚ್‌ ನೀಡಿ ನಿರಾಸೆಯಿಂದ ನಿರ್ಗಮಿಸಿದರು.

ಕೊನೆಯಲ್ಲಿ ರವೀಂದ್ರ ಜಡೇಜಾಗೆ ಜೊತೆಯಾಗಿದ್ದ ದೊನೊವನ್‌ ಫೆರಿರಾ 11 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್‌ಗಳಿದ್ದ ಅಜೇಯ 38 ರನ್‌ ಬಾರಿಸಿ ತಂಡದ ಮೊತ್ತವನ್ನು 214ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಇದ್ದ ಅಜೇಯ 45 ರನ್‌ ಬಾರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !