ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಡಿಯಲ್ಲಿ ಒಳನುಸುಳುವಿಕೆಗೆ ಯತ್ನಿಸಿದಪಾಕಿಸ್ತಾನದ ನುಸುಳುಕೋರ ಸೇರಿದಂತೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬಂಧಿತ ಪಾಕ್ ಆಕ್ರಮಿತ ಕಾಶ್ಮೀರದ ಝೀಶಾನ್ ಮಿರ್ ಎಂದು ಗುರುತಿಸಲಾಗಿದೆ.
ಈ ಕುರಿತು ಸೇನೆಯ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದ್ದು, ಗುಪ್ತಚರ ಮಾಹಿತಿಯ ಆಧಾರ ಶೋಧ ಕಾರ್ಯಾಚರಣೆ ವೇಳೆ ಓರ್ವ ಮಿರ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳುವಾಗ ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಲಾಗಿದೆ.
ಸೋಪೋರ್ ನಿವಾಸಿಗಳಿಬ್ಬರ ಬಂಧನ
ಪ್ರತ್ಯೇಕ ಘಟನೆಯಲ್ಲಿ, ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಿವಾಸಿಗಳಾದ ಇಬ್ಬರು ವ್ಯಕ್ತಿಗಳನ್ನು ಉರಿ ಸೆಕ್ಟರ್ನಲ್ಲಿ ಬಂಧಿಸಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಬಾರಾಮುಲ್ಲಾದ ಉರಿಯ ಪ್ರದೇಶದಲ್ಲಿ ಸೇನೆ ಮತ್ತುಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಸೋಪೋರ್ನ ಇಬ್ಬರು ವ್ಯಕ್ತಿಗಳನ್ನು ಚಿನಾರ್ ಯೋಧರು ತಮ್ಮ ಸಹಚರ ಮಾರ್ಗದರ್ಶಿಯೊಂದಿಗೆ ಉರಿ ಸೆಕ್ಟರ್ನಲ್ಲಿ ಒಳನುಗ್ಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.



