June 9, 2026
Tuesday, June 9, 2026
spot_img

CINE | ಬಾಕ್ಸ್ ಆಫೀಸ್ ಬಳಿಕ ಸ್ಟ್ರೀಮಿಂಗ್ ಲೋಕದಲ್ಲೂ ‘ಧುರಂಧರ್’ ದರ್ಬಾರ್: ವಾರಾಂತ್ಯದಲ್ಲೇ ಹೊಸ ದಾಖಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಧುರಂಧರ್ ದಿ ರಿವೆಂಜ್’ ಸಿನಿಮಾ ಈಗ ಡಿಜಿಟಲ್ ವೇದಿಕೆಯಲ್ಲೂ ಅದೇ ಅಬ್ಬರ ಮುಂದುವರಿಸಿದೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಈ ಚಿತ್ರ, ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಣೆಗಳನ್ನು ಪಡೆದು ಹೊಸ ಮೈಲಿಗಲ್ಲು ನಿರ್ಮಿಸಿದೆ. ಚಿತ್ರಮಂದಿರಗಳ ಆರಂಭಿಕ ಪ್ರದರ್ಶನಕ್ಕಿಂತ ಹಲವು ಪಟ್ಟು ಹೆಚ್ಚು ಪ್ರೇಕ್ಷಕರು ಒಟಿಟಿಯಲ್ಲಿ ಸಿನಿಮಾವನ್ನು ವೀಕ್ಷಿಸಿರುವುದು ವಿಶೇಷವಾಗಿದೆ.

ಕುಟುಂಬ ಸಮೇತ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು

ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಚಿತ್ರಕ್ಕೆ ಮನೆಮಂದಿಯ ಒಟ್ಟಾರೆ ವೀಕ್ಷಣೆ ದೊಡ್ಡ ಬಲವಾಗಿ ಪರಿಣಮಿಸಿದೆ. ಒಟ್ಟು ವೀಕ್ಷಣಾ ಅವಧಿಯ ಬಹುಪಾಲು ಕನೆಕ್ಟೆಡ್ ಟಿವಿ ಸಾಧನಗಳಿಂದಲೇ ದಾಖಲಾಗಿರುವುದು, ಕುಟುಂಬ ಸಮೇತ ಸಿನಿಮಾ ನೋಡಿದವರ ಸಂಖ್ಯೆ ಹೆಚ್ಚಿದೆ ಎಂಬುದನ್ನು ತೋರಿಸಿದೆ.

ಇದನ್ನೂ ಓದಿ:

ವಿಶೇಷ ಪ್ರೀಮಿಯರ್ ಅನುಭವಕ್ಕೆ ಮೆಚ್ಚುಗೆ

ಚಿತ್ರದ ಡಿಜಿಟಲ್ ಬಿಡುಗಡೆಯ ವೇಳೆ ಪ್ರೇಕ್ಷಕರಿಗೆ ವಿಶೇಷ ಅನುಭವ ಕಲ್ಪಿಸಲಾಗಿತ್ತು. ತೆರೆಮರೆಯ ದೃಶ್ಯಗಳು, ಕಲಾವಿದರ ನೆನಪುಗಳು ಹಾಗೂ ಹೆಚ್ಚುವರಿ ವಿಷಯಗಳೊಂದಿಗೆ ಪ್ರೀಮಿಯರ್ ಅನ್ನು ವಿಭಿನ್ನವಾಗಿ ರೂಪಿಸಲಾಗಿತ್ತು. ಇದರಿಂದ ಅನೇಕರು ಸಿನಿಮಾವನ್ನು ಮತ್ತೊಮ್ಮೆ ವೀಕ್ಷಿಸಲು ಮುಂದಾಗಿದ್ದಾರೆ ಎಂದು ವೇದಿಕೆ ತಿಳಿಸಿದೆ.

ಜಾಹೀರಾತುದಾರರಿಂದಲೂ ಭಾರೀ ಬೆಂಬಲ

ಚಿತ್ರದ ಡಿಜಿಟಲ್ ಬಿಡುಗಡೆಯಿಗೆ ಅನೇಕ ಪ್ರಮುಖ ಬ್ರಾಂಡ್‌ಗಳು ಮತ್ತು ಪ್ರಾಯೋಜಕರು ಕೈಜೋಡಿಸಿದ್ದು, ಒಟಿಟಿ ಕ್ಷೇತ್ರದಲ್ಲಿಯೂ ‘ಧುರಂಧರ್ ದಿ ರಿವೆಂಜ್’ ಹೊಸ ದಾಖಲೆಗಳನ್ನು ಬರೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !