June 11, 2026
Thursday, June 11, 2026
spot_img

Lifestyle Fitness | ಫಿಟ್ ಆಗಿರೋ ಜನ ಈ 5 ಕೆಲಸಗಳನ್ನು ಯಾವತ್ತೂ ಮಿಸ್ ಮಾಡೋದಿಲ್ಲ

ಫಿಟ್ ಆಗಿರುವವರು ದಿನಪೂರ್ತಿ ಜಿಮ್‌ನಲ್ಲೇ ಕಾಲ ಕಳೆಯುತ್ತಾರೆ ಅನ್ನೋದು ತಪ್ಪು ಕಲ್ಪನೆ. ಅವರ ಫಿಟ್ನೆಸ್ ಸೀಕ್ರೆಟ್ ದೊಡ್ಡ ದೊಡ್ಡ ಡಯಟ್ ಪ್ಲಾನ್‌ಗಳಲ್ಲಿ ಅಲ್ಲ, ಪ್ರತಿದಿನ ಪಾಲಿಸುವ ಸಣ್ಣ ಸಣ್ಣ ಹವ್ಯಾಸಗಳಲ್ಲಿ ಅಡಗಿರುತ್ತದೆ. ಇದೇ ಹವ್ಯಾಸಗಳು ದೀರ್ಘಾವಧಿಯಲ್ಲಿ ಆರೋಗ್ಯಕರ ಜೀವನಶೈಲಿಗೆ ಕಾರಣವಾಗುತ್ತವೆ.

ದೇಹವನ್ನು ಚಲನೆಯಲ್ಲಿರಿಸುತ್ತಾರೆ

ಜಿಮ್‌ಗೆ ಹೋಗದ ದಿನಗಳಲ್ಲೂ ಅವರು ವಾಕ್ ಮಾಡೋದು, ಮೆಟ್ಟಿಲು ಹತ್ತೋದು ಅಥವಾ ಸಣ್ಣ ಮಟ್ಟದ ದೈಹಿಕ ಚಟುವಟಿಕೆಯನ್ನು ಮಿಸ್ ಮಾಡೋದಿಲ್ಲ.

ನೀರು ಕುಡಿಯೋದನ್ನು ನಿರ್ಲಕ್ಷ್ಯ ಮಾಡೋದಿಲ್ಲ

ಹೈಡ್ರೇಶನ್‌ಗೆ ಅವರು ಹೆಚ್ಚಿನ ಆದ್ಯತೆ ಕೊಡುತ್ತಾರೆ. ದಿನಪೂರ್ತಿ ಸಾಕಷ್ಟು ನೀರು ಕುಡಿಯೋದು ಅವರ ದಿನಚರಿಯ ಭಾಗವಾಗಿರುತ್ತದೆ.

ನಿದ್ರೆಗೆ ಮಹತ್ವ ಕೊಡುತ್ತಾರೆ

ರಾತ್ರಿ ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು ಫಿಟ್ ಆಗಿರೋ ಜನರ ಸಾಮಾನ್ಯ ಅಭ್ಯಾಸ.

ಇದನ್ನೂ ಓದಿ:

ಆಹಾರದಲ್ಲಿ ಬ್ಯಾಲೆನ್ಸ್ ಕಾಪಾಡಿಕೊಳ್ಳುತ್ತಾರೆ

ಎಲ್ಲವನ್ನೂ ಸಂಪೂರ್ಣವಾಗಿ ತ್ಯಜಿಸೋದಿಲ್ಲ. ಆದರೆ ಪ್ರಮಾಣ ಮತ್ತು ಪೋಷಕಾಂಶಗಳ ಬಗ್ಗೆ ಗಮನ ಕೊಡುತ್ತಾರೆ. ಹೆಲ್ತಿ ಫುಡ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ನಿರಂತರತೆಯನ್ನು ಬಿಡೋದಿಲ್ಲ

ಮೂಡ್ ಇರಲಿ ಅಥವಾ ಇರದಿರಲಿ, ತಮ್ಮ ಆರೋಗ್ಯಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡುತ್ತಾರೆ. ಅವರ ದೊಡ್ಡ ಶಕ್ತಿ ಮೋಟಿವೇಷನ್ ಅಲ್ಲ, ಕಾನ್ಸಿಸ್ಟೆನ್ಸಿ.

ಫಿಟ್ನೆಸ್ ಅಂದ್ರೆ ಒಂದೇ ದಿನದ ಪ್ರಯತ್ನ ಅಲ್ಲ. ಪ್ರತಿದಿನದ ಸರಳ ಹವ್ಯಾಸಗಳೇ ಆರೋಗ್ಯಕರ ಜೀವನದ ನಿಜವಾದ ಅಡಿಪಾಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !