ನಾವು ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳ ಹಿಂದೆ ಓಡುತ್ತೇವೆ. ಒಳ್ಳೆಯ ಕೆಲಸ, ಹೆಚ್ಚಿನ ಹಣ, ದೊಡ್ಡ ಸಾಧನೆ, ಸಮಾಜದ ಮೆಚ್ಚುಗೆ ಇವೆಲ್ಲವೂ ಮುಖ್ಯವೇ. ಆದರೆ ಒಂದು ದಿನ ತುಂಬಾ ದಣಿದ ಮನಸ್ಸಿನೊಂದಿಗೆ ಮನೆಗೆ ಬಂದಾಗ, ನಮ್ಮನ್ನು ಸಮಾಧಾನಪಡಿಸೋದು ಇವೆಲ್ಲ ಅಲ್ಲ ಅನ್ನೋದು ಅರ್ಥವಾಗುತ್ತದೆ.
ಕೆಲವೊಮ್ಮೆ ಬಿಸಿ ಚಹಾದ ಜೊತೆ ಸಿಗುವ ಕೆಲವು ನಿಮಿಷಗಳ ನೆಮ್ಮದಿ, ಇಷ್ಟದ ಹಾಡು ಕೇಳುವ ಸಂತೋಷ, ಯಾವುದೇ ಒತ್ತಡ ಇಲ್ಲದೇ ಕಳೆಯುವ ಒಂದು ಸಂಜೆ, ಅಥವಾ ಕಾರಣವೇ ಇಲ್ಲದೇ ಮನಸಾರೆ ನಗುವ ಒಂದು ಕ್ಷಣ ಇವೆಲ್ಲವೂ ಜೀವನವನ್ನು ಸುಂದರವಾಗಿಸುತ್ತವೆ. ಇವು ದೊಡ್ಡ ಸಾಧನೆಗಳಂತೆ ಕಾಣಿಸದೇ ಇರಬಹುದು, ಆದರೆ ಮನಸ್ಸಿಗೆ ನೀಡುವ ಶಾಂತಿ ಮಾತ್ರ ಅಪಾರ.
ಇದನ್ನೂ ಓದಿ:
ವಿಚಿತ್ರ ಅಂದ್ರೆ, ನಾವು ಜೀವನದ ಸಂತೋಷವನ್ನು ಯಾವಾಗಲೂ ಭವಿಷ್ಯದಲ್ಲಿ ಹುಡುಕುತ್ತೇವೆ. ಇದು ಸಿಕ್ಕ ಮೇಲೆ ಖುಷಿಯಾಗಿರುತ್ತೇನೆ, ಅದು ಆದ ಮೇಲೆ ನೆಮ್ಮದಿಯಾಗಿ ಬದುಕುತ್ತೇನೆ ಅಂತ ಯೋಚಿಸುತ್ತೇವೆ. ಆದರೆ ಜೀವನ ಮಧ್ಯದಲ್ಲಿ ಕೊಡುವ ಸಣ್ಣ ಸಂತೋಷಗಳನ್ನು ಗಮನಿಸದೇ ಮುಂದಕ್ಕೆ ಓಡುತ್ತೇವೆ.
ಬಹುಶಃ ಸಂತೋಷ ಅನ್ನೋದು ಯಾವತ್ತೂ ದೊಡ್ಡ ಘಟನೆಗಳಲ್ಲಿ ಅಡಗಿರೋದಿಲ್ಲ. ಅದು ಸಾಮಾನ್ಯ ದಿನಗಳಲ್ಲೇ, ಸಾಮಾನ್ಯ ಕ್ಷಣಗಳಲ್ಲೇ, ನಾವು ಗಮನ ಕೊಡದೇ ಹಾದುಹೋಗುವ ವಿಷಯಗಳಲ್ಲೇ ಇರುತ್ತದೆ.
ಯಾಕೆಂದರೆ ಜೀವನದ ಕೊನೆಯಲ್ಲಿ ನಾವು ನೆನಪಿಸಿಕೊಳ್ಳೋದು ದೊಡ್ಡ ಪ್ರಶಸ್ತಿಗಳನ್ನು ಅಲ್ಲ…ಮನಸ್ಸಿಗೆ ಶಾಂತಿ ಕೊಟ್ಟ ಆ ಸಣ್ಣ ಸಣ್ಣ ಕ್ಷಣಗಳನ್ನೇ.



