June 18, 2026
Thursday, June 18, 2026
spot_img

ಲಖನೌನಲ್ಲಿ ‘ರನ್‌ ಸುನಾಮಿ’: ಟೀಮ್ ಇಂಡಿಯಾ ಇತಿಹಾಸದಲ್ಲಿ ಅಪರೂಪದ ಅಧ್ಯಾಯ ಬರೆದ ಗಿಲ್-ಇಶಾನ್ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಲಖನೌನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ವಿಶೇಷ ಸ್ಥಾನ ಪಡೆದುಕೊಂಡಿದೆ. 1974ರಲ್ಲಿ ಮೊದಲ ಏಕದಿನ ಪಂದ್ಯ ಆಡಿದ ಬಳಿಕ 52 ವರ್ಷಗಳ ಸುದೀರ್ಘ ಪಯಣದಲ್ಲಿ ಕಾಣದಿದ್ದ ಸಾಧನೆಯನ್ನು ಯುವ ಆಟಗಾರರಾದ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಸಾಧ್ಯವಾಗಿಸಿದ್ದಾರೆ.

80 ಎಸೆತಗಳ ಒಳಗೆ ಇಬ್ಬರಿಂದಲೂ ಶತಕ

ಮೂರನೇ ವಿಕೆಟ್‌ಗೆ ಜತೆಯಾದ ಈ ಜೋಡಿ ಎದುರಾಳಿ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಇಶಾನ್ ಕಿಶನ್ ಕೇವಲ 71 ಎಸೆತಗಳಲ್ಲಿ ಶತಕ ಪೂರೈಸಿ 125 ರನ್ ಗಳಿಸಿದರೆ, ನಾಯಕ ಶುಭ್‌ಮನ್ ಗಿಲ್ 77 ಎಸೆತಗಳಲ್ಲಿ ನೂರರ ಗಡಿ ದಾಟಿ 154 ರನ್‌ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು. ಭಾರತದ ಏಕದಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಬ್ಬರು ಬ್ಯಾಟರ್‌ಗಳು 80 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಶತಕ ದಾಖಲಿಸಿದ್ದಾರೆ.

ಇದನ್ನೂ ಓದಿ:

224 ರನ್‌ಗಳ ಸ್ಫೋಟಕ ಜೊತೆಯಾಟ

ಇವರಿಬ್ಬರು ಸೇರಿ ಕೇವಲ 140 ಎಸೆತಗಳಲ್ಲಿ 224 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಈ ಪ್ರದರ್ಶನದ ನೆರವಿನಿಂದ ಭಾರತ 400 ರನ್‌ಗಳ ಗಡಿಯನ್ನು ದಾಟಿ ಮತ್ತೊಮ್ಮೆ ತನ್ನ ಬ್ಯಾಟಿಂಗ್ ಬಲ ಪ್ರದರ್ಶಿಸಿತು.

ವಿಶ್ವ ದಾಖಲೆಗೆ ಸಮಬಲ

ಟೀಮ್ ಇಂಡಿಯಾ ಈ ಪಂದ್ಯದಲ್ಲಿ 400ಕ್ಕೂ ಅಧಿಕ ರನ್‌ಗಳನ್ನು ಎಂಟನೇ ಬಾರಿ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ಹೊಂದಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿತು. ಗಿಲ್ ಹಾಗೂ ಇಶಾನ್‌ರ ಸ್ಫೋಟಕ ಆಟದಿಂದ ಭಾರತದ 1077ನೇ ಏಕದಿನ ಪಂದ್ಯ ಸ್ಮರಣೀಯ ಅಧ್ಯಾಯವಾಗಿ ಇತಿಹಾಸದಲ್ಲಿ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !