June 21, 2026
Sunday, June 21, 2026
spot_img

ವೈರಲ್ ಆದ ಮಹಾಕುಂಭ್ ಯುವತಿಗೆ ಜೀವ ಬೆದರಿಕೆ? ಹೈಕೋರ್ಟ್ ಮೊರೆ ಹೋದ ಮೊನಾಲಿಸಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಕುಂಭ ಮೇಳದ ವೇಳೆ ವೈರಲ್ ಆಗಿ ದೇಶಾದ್ಯಂತ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ.

ಅಂತರ್ಧರ್ಮೀಯ ವಿವಾಹದ ಬಳಿಕ ತಮ್ಮ ವಿರುದ್ಧ ಬೆದರಿಕೆಗಳು ಹೆಚ್ಚಾಗಿವೆ ಎಂದು ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಕೇರಳ ಹೈಕೋರ್ಟ್, ದಂಪತಿಯ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ:

ಮಹಾಕುಂಭದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಯುವತಿಯಾಗಿ ವೈರಲ್ ಆಗಿದ್ದ ಮೊನಾಲಿಸಾ, ನಂತರ ಫರ್ಮಾನ್ ಖಾನ್ ಜೊತೆಗಿನ ಸಂಬಂಧ ಮತ್ತು ವಿವಾಹದ ಮೂಲಕ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು. ವಿವಾಹದ ನಂತರ ಕುಟುಂಬದ ವಿರೋಧ, ಕಾನೂನು ವಿವಾದಗಳು ಹಾಗೂ ಭದ್ರತೆ ಕುರಿತ ಆತಂಕಗಳು ಎದುರಾದ ಹಿನ್ನೆಲೆಯಲ್ಲಿ ದಂಪತಿ ಕೇರಳದಲ್ಲೇ ಆಶ್ರಯ ಪಡೆದಿದ್ದರು.

ಇದೀಗ ವಿವಾಹದ ಕೆಲವೇ ತಿಂಗಳಲ್ಲೇ ಜೀವ ಬೆದರಿಕೆ ಆರೋಪದೊಂದಿಗೆ ಹೈಕೋರ್ಟ್ ಮೆಟ್ಟಿಲೇರಿರುವುದು ಹೊಸ ಸಂಚಲನ ಸೃಷ್ಟಿಸಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !