ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ‘ಬಾದ್ಶಾ’ ಶಾರುಖ್ ಖಾನ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಕರಾವಳಿ ನಗರಿಗೆ ಕಿಂಗ್ ಖಾನ್ ಕಾಲಿಡುತ್ತಿದ್ದಂತೆ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನೆಚ್ಚಿನ ನಟನನ್ನು ಕಣ್ಣಾರೆ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ನೆರೆದಿದ್ದರು.
ರೋಹನ್ ಕಾರ್ಪೊರೇಷನ್ ಕಾರ್ಯಕ್ರಮದಲ್ಲಿ ಭಾಗಿ
ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾರುಖ್ ಖಾನ್ ಅವರು ನಗರಕ್ಕೆ ಆಗಮಿಸಿದ್ದಾರೆ. ಉದ್ಯಮ ರಂಗದಲ್ಲಿ ಮುಂಚೂಣಿಯಲ್ಲಿರುವ ರೋಹನ್ ಕಾರ್ಪೊರೇಷನ್ನ ಈ ಭವ್ಯ ಸಮಾರಂಭಕ್ಕೆ ಕಿಂಗ್ ಖಾನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಇಡೀ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ.
ಇದನ್ನೂ ಓದಿ:
ಕರಾವಳಿಯಲ್ಲಿ ಹಬ್ಬಿದ ಕಿಂಗ್ ಖಾನ್ ಕ್ರೇಜ್
ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಶಾರುಖ್ ಖಾನ್ ತಮ್ಮ ಎಂದಿನ ವಿಶಿಷ್ಟ ಶೈಲಿಯಲ್ಲಿ ಕೈಬೀಸಿ ಅಭಿಮಾನಿಗಳಿಗೆ ವಂದಿಸಿದರು. ಬಿಗಿ ಭದ್ರತೆಯ ನಡುವೆಯೂ ಕಿಂಗ್ ಖಾನ್ ನೋಡಲು ಮುಗಿಬಿದ್ದ ಜನರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮಂಗಳೂರಿನಲ್ಲಿ ಶಾರುಖ್ ಖಾನ್ ಅವರ ಈ ಭೇಟಿ ಕರಾವಳಿ ಜನರಲ್ಲಿ ಭಾರಿ ಕುತೂಹಲ ಮತ್ತು ಉತ್ಸಾಹವನ್ನು ಮೂಡಿಸಿದೆ.



