ರೈಸ್ ಸ್ಟಿಕ್ಸ್ ಮಾಡಲು ತುಂಬಾ ಸುಲಭ ಮತ್ತು ತಿನ್ನಲು ಅತ್ಯಂತ ಗರಿಗರಿಯಾಗಿ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಅಥವಾ ಮಕ್ಕಳಿಗೆ ಸಂಜೆ ಸ್ಕೂಲಿಂದ ಬಂದಾಗ ಕೊಡಲು ಇದು ಒಂದು ಪರ್ಫೆಕ್ಟ್ ಹೋಮ್-ಮೇಡ್ ಸ್ನ್ಯಾಕ್ಸ್. ಒಮ್ಮೆ ಮಾಡಿ ಇಟ್ಟರೆ 15 ರಿಂದ 20 ದಿನಗಳವರೆಗೆ ಕೆಡದಂತೆ ಡಬ್ಬದಲ್ಲಿ ಶೇಖರಿಸಿ ಇಡಬಹುದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ಹುರಿಗಡಲೆ ಪುಡಿ
ಬೆಣ್ಣೆ ಅಥವಾ ಬಿಸಿ ಎಣ್ಣೆ
ಜೀರಿಗೆ
ಖಾರದ ಪುಡಿ
ಇಂಗು
ಉಪ್ಪು
ಎಣ್ಣೆ
ಇದನ್ನೂ ಓದಿ:
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಖಾರದ ಪುಡಿ, ಇಂಗು ಮತ್ತು ಉಪ್ಪು ಹಾಕಿ ಒಟ್ಟಿಗೆ ಮಿಕ್ಸ್ ಮಾಡಿ. ಇದಕ್ಕೆ 1 ಚಮಚ ಬೆಣ್ಣೆ ಹಾಕಿ, ಹಿಟ್ಟಿನ ಜತೆ ಚೆನ್ನಾಗಿ ಕೈಯಿಂದ ಉಜ್ಜಿ ಮಿಕ್ಸ್ ಮಾಡಿ. ಇದರಿಂದ ಕಡ್ಡಿ ಗರಿಗರಿಯಾಗಿ ಬರುತ್ತದೆ. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ, ಚಪಾತಿ ಹಿಟ್ಟಿಗಿಂತ ಸ್ವಲ್ಪ ಸಾಫ್ಟ್ ಆಗಿ ಹಿಟ್ಟನ್ನು ಕಲಸಿಕೊಳ್ಳಬೇಕು.
ನಂತರ ಚಕ್ಲಿ ಒರಳು ತಗೆದುಕೊಂಡು, ಅದಕ್ಕೆ ಒಂದೇ ರಂಧ್ರವಿರುವ ಅಥವಾ ರಿಬ್ಬನ್ ಅಚ್ಚನ್ನು ಹಾಕಿ. ಒರಳಿನ ಒಳಗೆ ಸ್ವಲ್ಪ ಎಣ್ಣೆ ಸವರಿ, ಕಲಸಿದ ಹಿಟ್ಟನ್ನು ತುಂಬಿ, ಒಂದು ಪೇಪರ್ ಅಥವಾ ಪ್ಲೇಟ್ ಮೇಲೆ ಉದ್ದುದ್ದವಾಗಿ ಕಡ್ಡಿಗಳನ್ನು ಒತ್ತಿಕೊಳ್ಳಬೇಕು.ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಬಿಸಿಯಾದ ನಂತರ ಮಧ್ಯಮ ಉರಿಯಲ್ಲಿ ಕಡ್ಡಿಗಳನ್ನು ಹಾಕಿ, ಎರಡು ಕಡೆ ತಿರುಗಿಸಿ ಗೋಲ್ಡನ್ ಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ರೈಸ್ ಸ್ಟಿಕ್ಸ್ ರೆಡಿ.



