ಸಂಜೆ ಟೀ ಅಥವಾ ಕಾಫಿ ಜತೆ ಬಿಸಿಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಅನಿಸಿದರೆ ಚೀಸ್ ಕಾರ್ನ್ ಬಾಲ್ಸ್ ಅತ್ಯುತ್ತಮ ಆಯ್ಕೆ. ಹೋಟೆಲ್ ಅಥವಾ ಕೆಫೆಗಳಲ್ಲಿ ಸಿಗುವ ಈ ಜನಪ್ರಿಯ ತಿನಿಸನ್ನು ಈಗ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಹೊರಗಡೆ ಕ್ರಿಸ್ಪಿಯಾಗಿ, ಒಳಗಡೆ ಚೀಸ್ ಮತ್ತು ಸ್ವೀಟ್ ಕಾರ್ನ್ ರುಚಿಯೊಂದಿಗೆ ಇದು ಸಖತ್ ಟೇಸ್ಟಿ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಜೋಳ
ಆಲೂಗಡ್ಡೆ
ತುರಿದ ಚೀಸ್
ಮೈದಾ ಅಥವಾ ಅಕ್ಕಿ ಹಿಟ್ಟು
ಬ್ರೆಡ್ ಪುಡಿ
ಕಾಳುಮೆಣಸಿನ ಪುಡಿ ಮತ್ತು ಚಿಲ್ಲಿ ಫ್ಲೇಕ್ಸ್
ಉಪ್ಪು
ಎಣ್ಣೆ
ಇದನ್ನೂ ಓದಿ:
ಮಾಡುವ ವಿಧಾನ:
ಮೊದಲು ಒಂದು ಮಿಕ್ಸಿ ಜಾರ್‌ನಲ್ಲಿ ಸ್ವೀಟ್ ಕಾರ್ನ್ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಕಾರ್ನ್, ಮ್ಯಾಶ್ ಮಾಡಿದ ಆಲೂಗಡ್ಡೆ, ಚೀಸ್, ಕಾಳುಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು 2 ಚಮಚ ಬ್ರೆಡ್ ಪುಡಿ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು. ನಂತರ ಮೈದಾ ಅಥವಾ ಅಕ್ಕಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ತೆಳುವಾದ ಪೇಸ್ಟ್ ಮಾಡಿ. ಈ ಪೇಸ್ಟ್‌ನಲ್ಲಿ ಚೀಸ್ ಬಾಲ್ಸ್ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ಚೆನ್ನಾಗಿ ಹೊರಳಿಸಿ.ಕಾದ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದರೆ, ಹೊರಗಡೆ ಕ್ರಿಸ್ಪಿಯಾಗಿ ಒಳಗಡೆ ಚೀಸಿಯಾಗಿರುವ ಕಾರ್ನ್ ಬಾಲ್ಸ್ ಸಿದ್ಧ.



