ದಿಢೀರ್ ಎಂದು ಮಾಡಬಹುದಾದ ಟೇಸ್ಟಿ ಸ್ನ್ಯಾಕ್ಸ್ ಹುಡುಕುತ್ತಿದ್ದರೆ, ಈ ಸ್ವೀಟ್ ಕಾರ್ನ್ ಪಕೋಡ ರೆಸಿಪಿ ನಿಮಗಾಗಿ. ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ಹೋಟೆಲ್ ಶೈಲಿಯಲ್ಲಿ ಗರಿಗರಿಯಾದ ಜೋಳದ ಪಕೋಡ ಮಾಡುವ ರಹಸ್ಯ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್
ಕಡಲೆ ಹಿಟ್ಟು
ಅಕ್ಕಿ ಹಿಟ್ಟು
ಈರುಳ್ಳಿ
ಹಸಿರು ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಅಚ್ಚಖಾರದ ಪುಡಿ
ಗರಂ ಮಸಾಲಾ
ಜೀರಿಗೆ
ಉಪ್ಪು
ಎಣ್ಣೆ
ಇದನ್ನೂ ಓದಿ:
ಮಾಡುವ ವಿಧಾನ:
ಮೊದಲು ಸ್ವೀಟ್ ಕಾರ್ನ್ ಕಾಳುಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ, ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.ನಂತರ ರುಬ್ಬಿದ ಜೋಳವನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಅದೇ ಬೌಲ್ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಅಚ್ಚಖಾರದ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಬೇಕು.
ಜೋಳದಲ್ಲಿಯೇ ನೀರಿನಂಶ ಇರುವುದರಿಂದ ನೀರು ಹಾಕುವ ಅಗತ್ಯವಿರುವುದಿಲ್ಲ. ಮಿಶ್ರಣವು ಪಕೋಡ ಹಾಕುವ ಹದಕ್ಕೆ ಬರಬೇಕು.ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು. ಎಣ್ಣೆ ಕಾದ ನಂತರ, ಸಣ್ಣ ಸಣ್ಣ ಗಾತ್ರದ ಮಿಶ್ರಣವನ್ನು ಪಕೋಡಗಳಂತೆ ಎಣ್ಣೆಗೆ ಬಿಟ್ಟು ಮಧ್ಯಮ ಉರಿಯಲ್ಲಿ ಪಕೋಡಗಳು ಎರಡೂ ಬದಿಯಲ್ಲಿ ಹೊಂಬಣ್ಣ ಹಾಗೂ ಗರಿಗರಿಯಾಗುವವರೆಗೆ ಚೆನ್ನಾಗಿ ಕರಿದರೆ, ಬಿಸಿಬಿಸಿಯಾದ, ಕ್ರಿಸ್ಪಿಯಾದ ಜೋಳದ ಪಕೋಡ ಸವಿಯಲು ಸಿದ್ಧ.



