August 19, 2026
Wednesday, August 19, 2026
spot_img

ವಿಜಯ್‌ ಸರ್ಕಾರ ಡಮ್ಮಿ‌ ಗಾಡಿಯಂತೆ, ಯಾವ ಕ್ರಾಸ್‌ನಲ್ಲಾದ್ರೂ ಬೀಳಬಹುದು: ಎಂ.ಕೆ. ಸ್ಟಾಲಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಜೋಸೆಫ್‌ ವಿಜಯ್‌ ನೃತೃತ್ವದ ಟಿವಿಕೆ ಸರ್ಕಾರ ಮೂರರಿಂದ ಆರು ತಿಂಗಳಿನಲ್ಲಿ ಪತನವಾಗಲಿದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಭವಿಷ್ಯ ನುಡಿದಿದ್ದಾರೆ.

ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವಿಜಯ್‌ ಸರ್ಕಾರ ಉಳಿದಿರೋದು ಮೈತ್ರಿ ಪಕ್ಷಗಳ ಬೆಂಬಲದಿಂದ ಮಾತ್ರ. ಈ ಸರ್ಕಾರ ಐದು ವರ್ಷ ಪೂರ್ಣವಾಗೋಕೆ ಸಾಧ್ಯವೇ ಇಲ್ಲ.ವಿಜಯ್ ಅವರದ್ದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಮುಂದಿನ 3 ರಿಂದ 6 ತಿಂಗಳ ಒಳಗೆ ಪತನಗೊಳ್ಳಬಹುದು. ಇದೊಂದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು ಎಂದಿದ್ದಾರೆ.

ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದ್ರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !