June 29, 2026
Monday, June 29, 2026
spot_img

ಆಂಟಿ ಸ್ವಲ್ಪ ಹೋಮ್‌ವರ್ಕ್ ಮಾಡಿ: ಮತಾಂತರ ವದಂತಿ ಹಬ್ಬಿಸಿದ ಕಂಟೆಂಟ್ ಕ್ರಿಯೇಟರ್‌ಗೆ ಉರ್ಫಿ ಕ್ಲಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ವಿಭಿನ್ನ ಫ್ಯಾಷನ್ ಹಾಗೂ ನೇರ ನಡೆ-ನುಡಿಗಳಿಂದಲೇ ಸದಾ ಲೈಮ್‌ಲೈಟ್‌ನಲ್ಲಿರುವ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಸದ್ಯ ತೀವ್ರ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಮತ್ತು ತಮ್ಮ ಹೆಸರನ್ನು ‘ರೀತಾ ಭಾರದ್ವಾಜ್’ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಮಾಜಿ ಪತ್ರಕರ್ತೆಯ ಸುಳ್ಳು ವಿಡಿಯೋ

ಡಿಡಿ ನ್ಯೂಸ್‌ನ ಮಾಜಿ ಉದ್ಯೋಗಿ ಎಂದು ಹೇಳಿಕೊಂಡಿರುವ ಮೀತಾ ಚೌಧರಿ ಎಂಬ ಕಂಟೆಂಟ್ ಕ್ರಿಯೇಟರ್, ಉರ್ಫಿ ಬಟ್ಟೆ ಧರಿಸುವ ಶೈಲಿಯನ್ನು ಟೀಕಿಸಿ ವಿಡಿಯೋ ಮಾಡಿದ್ದರು. ಅದರಲ್ಲಿ, “ಉರ್ಫಿ ಈಗ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ರೀತಾ ಭಾರದ್ವಾಜ್ ಆಗಿದ್ದಾರೆ. ಅವರೀಗ ಸ್ವಲ್ಪ ಲಜ್ಜೆಯನ್ನು ಕಲಿಯಬೇಕು” ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ಉರ್ಫಿ ಖಡಕ್ ತಿರುಗೇಟು

ಈ ಸುಳ್ಳು ಸುದ್ದಿಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಉರ್ಫಿ ಜಾವೇದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಇಂತಹ ಮೂರ್ಖರೆಲ್ಲಾ ಪತ್ರಕರ್ತರು ಎಂದು ಕರೆದುಕೊಳ್ಳುತ್ತಾರೆ. ಆಂಟಿ, ದಯವಿಟ್ಟು ಸ್ವಲ್ಪ ರಿಸರ್ಚ್ ಮಾಡಿ. ನಾನು ಯಾವುದೇ ಧರ್ಮ ಬದಲಾಯಿಸಿಲ್ಲ, ಅಸಲಿಗೆ ನಾನು ಯಾವ ಧರ್ಮವನ್ನೂ ನಂಬುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಬಟ್ಟೆಯಲ್ಲಷ್ಟೇ ಅಲ್ಲ, ಮಾತಿನಲ್ಲೂ ನೇರ ಮತ್ತು ನಗ್ನ. ನನ್ನನ್ನು ನಿಂದಿಸುವುದಿದ್ದರೆ ಧೈರ್ಯವಾಗಿ ಮಾಡಿ, ಆದರೆ ಸುಳ್ಳು ಸುದ್ದಿಗಳನ್ನು ಹರಡಬೇಡಿ. ನಿಮ್ಮ ಪತ್ರಿಕೋದ್ಯಮ ನೋಡಿ ನನಗೆ ನಾಚಿಕೆಯಾಗುತ್ತಿದೆ” ಎಂದು ಉರ್ಫಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !