October 17, 2026
Saturday, October 17, 2026
spot_img

ಎನ್‌ಟಿಆರ್ ಹೊಸ ಮಿಷನ್ ಶುರು: ತ್ರಿವಿಕ್ರಮ್ ಜೊತೆ ಭರ್ಜರಿ ಸಿನಿಮಾ ಮಾಡೋದು ಪಕ್ಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಆರ್‌ಆರ್‌ಆರ್’ ಬಳಿಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಜೂನಿಯರ್ ಎನ್‌ಟಿಆರ್ ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಅವರು ಮತ್ತೊಮ್ಮೆ ಕೈಜೋಡಿಸಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಮತ್ತೆ ಒಂದಾದ ಹಿಟ್ ಜೋಡಿ

ಈ ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್ ಹಾಗೂ ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಪ್ರಕಟವಾಗಿಲ್ಲ. ಈ ಹಿಂದೆ ‘ಅರವಿಂದ ಸಮೇತ’ ಚಿತ್ರದ ಯಶಸ್ಸಿನ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.

ಇದನ್ನೂ ಓದಿ:

ಪೋಸ್ಟರ್ ಹುಟ್ಟಿಸಿದ ಕುತೂಹಲ

ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಜ್ವಾಲೆಯ ನಡುವೆ ತ್ರಿಶೂಲದ ಚಿತ್ರ ಕಾಣಿಸಿಕೊಂಡಿದೆ. “ಶಿವನ ಮಗ, ಪಾರ್ವತಿಯ ಹೆಮ್ಮೆ” ಎಂಬ ಸಾಲುಗಳೊಂದಿಗೆ ಪೋಸ್ಟರ್ ಬಿಡುಗಡೆಯಾಗಿದ್ದು, ಇದು ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿ ಕಥೆಯನ್ನು ಆಧರಿಸಿರಬಹುದೇ ಎಂಬ ಚರ್ಚೆ ಸಿನಿ ವಲಯದಲ್ಲಿ ಆರಂಭವಾಗಿದೆ.

ಅನಿರುದ್ಧ್ ಸಂಗೀತದ ಮ್ಯಾಜಿಕ್

ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಎನ್‌ಟಿಆರ್, ತ್ರಿವಿಕ್ರಮ್ ಹಾಗೂ ಅನಿರುದ್ಧ್ ಅವರ ಕಾಂಬಿನೇಷನ್ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಸಿನಿಪ್ರಿಯರಲ್ಲಿ ಮೂಡಿದೆ.

Must Read