August 27, 2026
Thursday, August 27, 2026
spot_img

ರೆಟ್ರೋ ಸ್ಟೈಲ್‌ನಲ್ಲಿ ಶಿವಣ್ಣನ ಅಬ್ಬರ: ಸಿನಿಪ್ರಿಯರ ಗಮನ ಸೆಳೆದ ‘666’ ಟೀಸರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೋಸ್ಟರ್‌ಗಳ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡ ಇದೀಗ ರೆಟ್ರೋ ಶೈಲಿಯ ಟೀಸರ್ ಅನಾವರಣಗೊಳಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಶಿವಣ್ಣ-ಡಾಲಿ ರೆಟ್ರೋ ಲುಕ್ ಹೈಲೈಟ್

ಟೀಸರ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ವಿಭಿನ್ನ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಶಿವರಾಜ್‌ಕುಮಾರ್ ಬಾಂಡ್ ಶೈಲಿಯ ಪಾತ್ರದಲ್ಲಿ ಮಿಂಚಿದ್ದು, ಕೆಲವು ದೃಶ್ಯಗಳು ಡಾ. ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಬಾಂಡ್ ಚಿತ್ರಗಳ ನೆನಪನ್ನು ಅಭಿಮಾನಿಗಳಿಗೆ ಮೂಡಿಸುತ್ತಿವೆ.

ಇದನ್ನೂ ಓದಿ:

ತಾಂತ್ರಿಕ ವಿಭಾಗದ ಅದ್ಭುತ ಕೆಲಸ

ಚಿತ್ರದ ರೆಟ್ರೋ ವಾತಾವರಣವನ್ನು ನೈಜವಾಗಿ ಕಟ್ಟಿಕೊಡುವಲ್ಲಿ ಮೇಕಪ್ ಕಲಾವಿದ ಎನ್.ಕೆ. ಉಮಾ ಮಹೇಶ್ವರ, ವಸ್ತ್ರ ವಿನ್ಯಾಸಕಿ ಇಂಚರಾ ಸುರೇಶ್, ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಹಾಗೂ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಕೆಲಸ ವಿಶೇಷವಾಗಿ ಗಮನ ಸೆಳೆದಿದೆ. ಟೀಸರ್‌ನ ದೃಶ್ಯ ವೈಭವ ಮತ್ತು ಹಿನ್ನೆಲೆ ಸಂಗೀತ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಚಾರಕ್ಕೆ ವೇಗ ನೀಡಿದ ಚಿತ್ರತಂಡ

ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ನಿರ್ದೇಶಕ ಹೇಮಂತ್ ಎಂ. ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಲವು ಹಂತಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಟೀಸರ್ ಬಿಡುಗಡೆಯೊಂದಿಗೆ ಚಿತ್ರತಂಡ ಪ್ರಚಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಬಿಡುಗಡೆಯ ಮುನ್ನವೇ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !