ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸಲಾಗಿದೆ ಎನ್ನಲಾದ ಒಂದು ಪುಸ್ತಕ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರತ್ಯೇಕತಾವಾದಿ ನಾಯಕರು ಹಾಗೂ ಭಯೋತ್ಪಾದಕಾರನ್ನು ‘ಮಹಾನ್ ವ್ಯಕ್ತಿಗಳು’ ಎಂದು ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ತೀವ್ರಗೊಂಡಿದೆ.
ವಿವಾದದ ಮೂಲ ಏನು?
‘ಗ್ರೇಟ್ ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜೆ&ಕೆ’ ಎಂಬ ಪುಸ್ತಕದಲ್ಲಿ ಕೆಲವು ಪ್ರತ್ಯೇಕತಾವಾದಿ ನಾಯಕರನ್ನು ಆದರ್ಶ ವ್ಯಕ್ತಿಗಳಂತೆ ಪರಿಚಯಿಸಲಾಗಿದೆ ಎನ್ನಲಾಗಿದೆ. ಈ ಪುಸ್ತಕವನ್ನು ಶಾಲಾ ಗ್ರಂಥಾಲಯಗಳಿಗೆ ಪೂರೈಸಿರುವ ಬಗ್ಗೆ ನಾಗರಿಕ ಸಂಘಟನೆಗಳು ಪ್ರಶ್ನೆ ಎತ್ತಿವೆ.
ಇದನ್ನೂ ಓದಿ:
ಬಿಜೆಪಿಯಿಂದ ತೀವ್ರ ಆಕ್ಷೇಪ
ವಿಪಕ್ಷ ಬಿಜೆಪಿ, ಈ ಘಟನೆಗೆ ಶಿಕ್ಷಣ ಇಲಾಖೆಯೇ ಹೊಣೆ ಎಂದು ಆರೋಪಿಸಿದೆ. ಪುಸ್ತಕವನ್ನು ತಕ್ಷಣ ಹಿಂಪಡೆದು, ಅದರ ಅನುಮೋದನೆ ನೀಡಿದವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಸರ್ಕಾರದ ಪ್ರತಿಕ್ರಿಯೆ
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ತಾವು ಪುಸ್ತಕವನ್ನು ಇನ್ನೂ ನೋಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ಪರಿಶೀಲನೆ ನಡೆಸುವಂತೆ ಒತ್ತಾಯಗಳು ಹೆಚ್ಚಾಗಿದ್ದು, ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪುಸ್ತಕ ಆಯ್ಕೆ ಪ್ರಕ್ರಿಯೆ ಮತ್ತೆ ಚರ್ಚೆಗೆ ಬಂದಿದೆ.



