ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬರುತ್ತಿವೆ. ಬಂಧಿತರಲ್ಲಿ ಒಬ್ಬನಾದ ಎಣಿಕೆ ಸಿಬ್ಬಂದಿ ಅವಿನಾಶ್ ಶುಕ್ಲಾ ವಿಚಾರಣೆಯಲ್ಲಿ, ಅಕ್ರಮವಾಗಿ ಪಡೆದ ಹಣದ ಒಂದು ಭಾಗವನ್ನು ಕುಟುಂಬದ ಅಗತ್ಯಗಳು, ಸಹೋದರನ ಮದುವೆ, ಸ್ನೇಹಿತರು ಹಾಗೂ ಪ್ರೇಯಸಿಗೆ ದುಬಾರಿ ಉಡುಗೊರೆಗಳನ್ನು ನೀಡಲು ಬಳಸಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.
ಕುಟುಂಬ, ಮದುವೆ, ಐಫೋನ್‌ಗೆ ಲಕ್ಷಾಂತರ ಖರ್ಚು
ಮೂಲಗಳ ಪ್ರಕಾರ, ಆರೋಪಿಯು ಸುಮಾರು ₹19 ಲಕ್ಷ ಹಣವನ್ನು ವೈಯಕ್ತಿಕ ಖರ್ಚುಗಳಿಗೆ ಬಳಸಿದ್ದಾನೆ ಎಂದು ಹೇಳಲಾಗಿದೆ. ಸಹೋದರನ ಮದುವೆಗೆ ಸುಮಾರು ₹6 ಲಕ್ಷ ವೆಚ್ಚ ಮಾಡಿದ್ದು, ಮತ್ತೊಬ್ಬ ಸಹೋದರನಿಗೆ ₹5ರಿಂದ ₹6 ಲಕ್ಷ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿ, ಆಕೆಯ ಬ್ಯಾಂಕ್ ಖಾತೆಗೆ ಸುಮಾರು ₹2.5 ಲಕ್ಷ ವರ್ಗಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ:
₹7 ಕೋಟಿಗೂ ಅಧಿಕ ಹಣದ ತನಿಖೆ ಮುಂದುವರಿಕೆ
ಪ್ರಕರಣ ಸಂಬಂಧ ಈಗಾಗಲೇ ಎಂಟು ಎಣಿಕೆ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ದೇಣಿಗೆ ಹಣದಲ್ಲಿ ₹7ರಿಂದ ₹7.5 ಕೋಟಿ ವರೆಗೆ ಅಕ್ರಮ ನಡೆದಿರುವ ಶಂಕೆ ತನಿಖೆಯಲ್ಲಿದೆ. ಇದುವರೆಗೆ ಸುಮಾರು ₹80 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣದ ವಹಿವಾಟು, ಬ್ಯಾಂಕ್ ಖಾತೆಗಳು ಹಾಗೂ ಸಂಬಂಧಿತ ಆಸ್ತಿಗಳ ಕುರಿತು ತನಿಖೆ ಮುಂದುವರಿದಿದ್ದು, ನಿಖರ ಅಕ್ರಮದ ಪ್ರಮಾಣವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.



