July 7, 2026
Tuesday, July 7, 2026
spot_img

ರಾಮ ಮಂದಿರ ದೇಣಿಗೆ ವಿವಾದ: ಮೊದಲ ಬಾರಿಗೆ ಮೌನ ಮುರಿದ ಚಂಪತ್ ರಾಯ್ ಹೇಳಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ ಮಂದಿರದ ದೇಣಿಗೆ ಎಣಿಕೆ ವೇಳೆ ನಡೆದಿರುವ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಂದೆ ಸರಿದಿರುವ ವಿಎಚ್‌ಪಿ ನಾಯಕ ಚಂಪತ್ ರಾಯ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಅವರು ಮನವಿ ಮಾಡಿದ್ದಾರೆ.

SIT ವರದಿ ಬಳಿಕವೇ ಸ್ಪಷ್ಟ ಚಿತ್ರಣ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪ್ರಕರಣದ ಕುರಿತು ವಿಶೇಷ ತನಿಖಾ ತಂಡ (SIT) ಈಗಾಗಲೇ ತನಿಖೆ ನಡೆಸುತ್ತಿದೆ. ಟ್ರಸ್ಟ್ ಕೂಡ ತನಿಖೆಯ ಪ್ರಾಥಮಿಕ ವರದಿ ಬರುವವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

‘ಪ್ರಾಥಮಿಕ ವರದಿಯೇ ಅಂತಿಮವಲ್ಲ’

ಪ್ರಕರಣದ ಬಗ್ಗೆ ಹಲವು ಆರೋಪಗಳು ಕೇಳಿಬಂದಿದ್ದರೂ, ಆರಂಭಿಕ ವರದಿಯನ್ನೇ ಅಂತಿಮ ಸತ್ಯವೆಂದು ಪರಿಗಣಿಸಬಾರದು ಎಂದು ಚಂಪತ್ ರಾಯ್ ಹೇಳಿದ್ದಾರೆ. ಅಂತಿಮ ತನಿಖಾ ವರದಿ ಹೊರಬಂದ ಬಳಿಕವೇ ವಾಸ್ತವಾಂಶಗಳು ಸ್ಪಷ್ಟವಾಗಲಿದ್ದು, ಎಲ್ಲ ಅನುಮಾನಗಳಿಗೆ ಉತ್ತರ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಸಾರ್ವಜನಿಕ ಜೀವನ ಪಾರದರ್ಶಕ’

ಕಳೆದ ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿರುವ ಚಂಪತ್ ರಾಯ್, 1991ರಿಂದ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸಾರ್ವಜನಿಕ ಜೀವನ ತೆರೆದ ಪುಸ್ತಕದಂತಿದ್ದು, ಯಾರೇ ಬೇಕಾದರೂ ಅದನ್ನು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !