ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಕಲೇಶಪುರದ ಗವಿಬೆಟ್ಟದಲ್ಲಿ ರೀಲ್ಸ್ಗಾಗಿ ಪ್ರವಾಸಿಗರು ಹುಚ್ಚಾಟ ನಡೆಸಿದ್ದಾರೆ. ಥಾರ್ ಕಾರನ್ನು ಡ್ರಿಫ್ಟಿಂಗ್ ಮಾಡಿ ಜಾನುವಾರುಗಳ ಮೇವು ಹಾಗೂ ರಸ್ತೆಗೆ ಹಾನಿ ಮಾಡಿದ್ದಾರೆ.
ಕಾಡೆಮ್ಮೆ, ಮುಳ್ಳುಹಂದಿ, ಕಾಡುಬೆಕ್ಕು, ಕೋತಿ, ನವಿಲು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಈ ಭಾಗದಲ್ಲಿ ನೆಲೆಸಿವೆ. ವನ್ಯಜೀವಿಗಳು ಇಲ್ಲಿ ನೀರು ಕುಡಿಯಲು ಬರುತ್ತಿದ್ದವು. ಆದರೆ ಇದೀಗ ಥಾರ್ನ್ನು ಮನಬಂದಂತೆ ಓಡಿಸಿದ್ದು, ಹುಲ್ಲು ಹಾಳಾಗಿ ರಸ್ತೆಗೂ ಹಾನಿಯಾಗಿದೆ.
ಇಲ್ಲಿ ವಾಹನಗಳ ನಿರ್ಬಂಧವಿದ್ದರು ಅತಿ ಕ್ರಮ ಪ್ರವೇಶ ಮಾಡಿ ಪ್ರವಾಸಿಗರು ಪುಂಡಾಟ ಮೆರೆದಿದ್ದಾರೆ. ಪ್ರವಾಸಿಗರ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.



