September 2, 2026
Wednesday, September 2, 2026
spot_img

ಮತದಾರರಿಗೆ ಹೊಸ ಸೂಚನೆ: BLOಗೆ ಫಾರ್ಮ್ ಕೊಡದಿದ್ದರೆ ಮತದಾನದ ಹಕ್ಕೇ ಕಳೆದುಕೊಳ್ತೀರ ಹುಷಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಈ ವೇಳೆ ಮನೆ ಮನೆಗೆ ವಿತರಿಸಲಾಗುತ್ತಿರುವ ಎನ್ಯುಮರೇಷನ್ ಫಾರ್ಮ್ ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ. ನಿಯಮ ಪಾಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮನೆ ಮನೆಗೆ ಭೇಟಿ ನೀಡಿ ಫಾರ್ಮ್ ವಿತರಣೆ

ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಭಾಗವಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿ ಮತದಾರರ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸುತ್ತಿದ್ದಾರೆ. ಮತದಾರರು ಫಾರ್ಮ್‌ನಲ್ಲಿ ಕೇಳಿರುವ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅದನ್ನು ಸಂಬಂಧಿತ ಬಿಎಲ್‌ಒಗಳಿಗೆ ಮಾತ್ರ ಹಿಂದಿರುಗಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ:

ಫಾರ್ಮ್ ಸಲ್ಲಿಸದಿದ್ದರೆ ಹೆಸರು ಕೈಬಿಡುವ ಸಾಧ್ಯತೆ

ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ, ಫಾರ್ಮ್ ಭರ್ತಿ ಮಾಡಿ ಮರಳಿ ಸಲ್ಲಿಸದ ಮತದಾರರ ವಿವರಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಕ್ರಮ ಕೈಗೊಳ್ಳಬಹುದು. ಹೀಗಾಗಿ ಯಾವುದೇ ನಿರ್ಲಕ್ಷ್ಯ ತೋರದೆ ಸಮಯಕ್ಕೆ ಸರಿಯಾಗಿ ದಾಖಲೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಸಹಾಯಕ್ಕೆ ವಿಡಿಯೋ ಮಾರ್ಗದರ್ಶಿ

ಫಾರ್ಮ್ ಹೇಗೆ ಭರ್ತಿ ಮಾಡಬೇಕು ಎಂಬುದರ ಕುರಿತು ಚುನಾವಣಾ ಆಯೋಗವು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಗದರ್ಶಿ ವಿಡಿಯೋಗಳನ್ನು ಪ್ರಕಟಿಸಿದೆ. ಅಗತ್ಯವಿದ್ದರೆ ಮತದಾರರು ಅವುಗಳನ್ನು ವೀಕ್ಷಿಸಿ ಸರಿಯಾದ ರೀತಿಯಲ್ಲಿ ಫಾರ್ಮ್ ಭರ್ತಿ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !