July 15, 2026
Wednesday, July 15, 2026
spot_img

ಕನ್ನಡ-ಮರಾಠಿ ಪ್ರೇಮ ಬಂಧನ: 9 ವರ್ಷಗಳ ಪ್ರೀತಿ, 3 ವರ್ಷಗಳ ದಿಗ್ಬಂಧನ, ಕೊನೆಗೂ ಒಂದಾದ ಜೋಡಿ

ಹೊಸದಿಗಂತ ವರದಿ ಬೆಳಗಾವಿ

ಬೆಳಗಾವಿ:  ಕನ್ನಡಿಗ ಯುವಕ ರೋಹನ್ ಪೂಜಾರಿ ಮತ್ತು ಮರಾಠಿ ಯುವತಿ ಈಶಾ ಶೇಟಕರ್ ಕಳೆದ ೯ ವರ್ಷಗಳಿಂದ ಪ್ರೀತಿಸುತ್ತಿದ್ದು, 3 ವರ್ಷಗಳ ಹಿಂದೆಯೇ ಬೆಳಗಾವಿಯ ದತ್ತ ಮಂದಿರದಲ್ಲಿ ಮದುವೆಯಾಗಿದ್ದರು.

ವಿರೋಧ ಮತ್ತು ದಿಗ್ಬಂಧನ:

ರೋಹನ್ ಮಧ್ಯಮ ವರ್ಗದವನಾಗಿದ್ದರಿಂದ ಈಶಾಳ ಶ್ರೀಮಂತ ಕುಟುಂಬದವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಮದುವೆ ಮಾಡಿಸಿಕೊಡುವುದಾಗಿ ಸುಳ್ಳು ಹೇಳಿ ಮನೆಗೆ ಕರೆದೊಯ್ದ ಹೆತ್ತವರು, ಆಕೆಯ ಮೊಬೈಲ್ ಕಿತ್ತುಕೊಂಡು ಮೂರು ವರ್ಷಗಳ ಕಾಲ ಮನೆಯಲ್ಲೇ ಕೂಡಿಹಾಕಿ ದೈಹಿಕ-ಮಾನಸಿಕ ಕಿರುಕುಳ ನೀಡಿದ್ದರು.

ಒಂದಾದ ಪ್ರೇಮಿಗಳು:

ಇತ್ತೀಚೆಗೆ ಈಶಾ ಹೇಗೋ ರೋಹನ್‌ಗೆ ಕರೆ ಮಾಡಿ ತನ್ನ ನೋವನ್ನು ತೋಡಿಕೊಂಡಿದ್ದು, ಹೆತ್ತವರ ದಿಗ್ಬಂಧನದಿಂದ ಓಡಿಬಂದು ಮತ್ತೆ ಪ್ರಿಯಕರನ ಕೈಹಿಡಿದಿದ್ದಾಳೆ.

ಇದನ್ನೂ ಓದಿ:

ರಕ್ಷಣೆಗೆ ಮನವಿ:

ಸದ್ಯ ಕಾನೂನುಬದ್ಧವಾಗಿ ನೋಂದಣಿ ಮದುವೆ (ರಿಜಿಸ್ಟರ್ ಮ್ಯಾರೇಜ್) ಮಾಡಿಕೊಳ್ಳಲು ನಿರ್ಧರಿಸಿರುವ ಈ ಜೋಡಿ, ಯುವತಿಯ ಪ್ರಭಾವಿ ಕುಟುಂಬದಿಂದ ತಮಗೆ ಪ್ರಾಣಾಪಾಯವಿರುವುದರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಬೆಳಗಾವಿ ಎಸ್ಪಿ ಕಚೇರಿ ಮೆಟ್ಟಿಲೇರಿ ಕಣ್ಣೀರಿಟ್ಟಿದ್ದಾಳೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !