July 17, 2026
Friday, July 17, 2026
spot_img

ನಾಳೆ ಬೆಳಗಾವಿಗೆ ಪೇಜಾವರ ಶ್ರೀಗಳ ಭೇಟಿ: 60 ವರ್ಷ ಹಳೆಯ ವಿದ್ಯಾರ್ಥಿ ನಿಲಯದ ಜೀರ್ಣೋದ್ಧಾರಕ್ಕೆ ವಿಶೇಷ ಸಭೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಜುಲೈ 18ರಂದು ಶನಿವಾರ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿಯ ಶ್ರೀಕೃಷ್ಣಮಠದ ಆವರಣದಲ್ಲಿರುವ ಸುಮಾರು 60 ವರ್ಷಗಳಷ್ಟು ಹಳೆಯ ವಿದ್ಯಾರ್ಥಿ ನಿಲಯದ ಜೀರ್ಣೋದ್ಧಾರ ಕುರಿತು ಚರ್ಚಿಸಲು ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿ ನಿಲಯದ ಅಭಿವೃದ್ಧಿ ಹಾಗೂ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಕ್ತರು ಮತ್ತು ಹಿತೈಷಿಗಳ ಸಲಹೆ-ಸೂಚನೆಗಳನ್ನು ಪಡೆಯುವ ಉದ್ದೇಶದಿಂದ ಈ ಸಭೆ ನಡೆಯಲಿದೆ.

ಬೆಳಗಾವಿ ನಗರದ ಶ್ರೀಕೃಷ್ಣಮಠದ ಭಕ್ತರು ಹಾಗೂ ಶ್ರೀಪಾದಂಗಳವರ ಅಭಿಮಾನಿಗಳು ಸಂಜೆ 5 ಗಂಟೆಗೆ ಆರ್ಪಿಡಿ ಕಾಲೇಜು ಎದುರಿನ ಶ್ರೀಕೃಷ್ಣ ಮಠದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

ಇದನ್ನೂ ಓದಿ:

ಸಭೆಯ ಬಳಿಕ ಸಂಜೆ 7 ಗಂಟೆಗೆ ಶ್ರೀ ರಾಮ ವಿಠಲದೇವರ ತೊಟ್ಟಿಲು ಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಫಲ-ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮಠದ ವತಿಯಿಂದ ಮನವಿ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !