October 18, 2026
Sunday, October 18, 2026
spot_img

ಮನೆ ಮುಂದೆ ಹಾಯಾಗಿ ಆಡ್ತಿದ್ದ ಬಾಲಕನ ಮೇಲೆರಗಿದ ಬೀದಿನಾಯಿಗಳು, ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಘಟನೆ ರಾಯಚೂರಿನ ಮಲಿಯಾಬಾದ್‌ ಗ್ರಾಮದಲ್ಲಿ ನಡೆದಿದೆ.

4 ವರ್ಷದ ಬಾಲಕ ವೇಣುಗೋಪಾಲ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿ ವೇಳೆ ನಾಯಿಗಳು ಬಾಲಕನ ತಲೆಯ ಭಾಗವನ್ನ ಸಂಪೂರ್ಣವಾಗಿ ಕಚ್ಚಿದೆ. ಈ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಬಾಲಕನನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಬೀದಿನಾಯಿಗಳ ಭಯದಿಂದ ಮಕ್ಕಳನ್ನು ಮನೆಯ ಮುಂದೆ ಆಡಲು ಬಿಡುವುದೂ ಕಷ್ಟವಾಗಿದೆ. ನಾಯಿಗಳನ್ನು ಹಿಡಿಯಿರಿ ಎಂದು ಪೋಷಕರು ಮನವಿ ಮಾಡಿದ್ದಾರೆ.

Must Read