July 22, 2026
Wednesday, July 22, 2026
spot_img

ಕಮಿಷನರ್ ಆಫೀಸ್‌ಗೆ ನುಗ್ಗಿದ ಬಿಜೆಪಿ ದಂಡು: ಕಾಂಗ್ರೆಸ್ ಗೂಂಡಾಗಿರಿ ವಿರುದ್ಧ ಕೈಬರಹದಲ್ಲೇ ದೂರು ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೆಪಿಸಿಸಿ ಕಚೇರಿ ಎದುರು ತಮ್ಮ ಪಕ್ಷದ ನಾಯಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಬಿಜೆಪಿ ಮುಖಂಡರ ನಿಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದೆ.

ಪಾದಯಾತ್ರೆ ಮೂಲಕ ಆಯುಕ್ತರ ಕಚೇರಿಗೆ:

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಿಂದ ಪಾದಯಾತ್ರೆ ಮೂಲಕ ಪೊಲೀಸ್ ಆಯುಕ್ತರ ಕಚೇರಿಗೆ ಧಾವಿಸಿದ ಬಿಜೆಪಿ ನಾಯಕರ ದಂಡು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತು. ದೂರು ನೀಡುವ ಸಂದರ್ಭದಲ್ಲಿ ಆಯುಕ್ತರ ಕಚೇರಿ ಮುಂಭಾಗದಲ್ಲಿ ಸೇರಿದ ಜಮಾವಣೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿತು.

ಕೈಬರಹದ ಮೂಲಕ ದೂರು ಸಲ್ಲಿಕೆ:

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ರಾಜಧಾನಿಯಲ್ಲಿ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ, ಕೈಬರಹದಲ್ಲಿಯೇ ಸಿದ್ಧಪಡಿಸಿದ ದೂರನ್ನು ಆಯುಕ್ತರಿಗೆ ಹಸ್ತಾಂತರಿಸಿತು. ಪ್ರಮುಖವಾಗಿ ಬಿಜೆಪಿ ಮುಖಂಡರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಬಿ.ಪಿ. ಹರೀಶ್, ಸಿ.ಕೆ. ರಾಮಮೂರ್ತಿ ಹಾಗೂ ಎಸ್. ಹರೀಶ್ ಅವರ ಮೇಲೆ ಮೊಟ್ಟೆ, ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:

ಮೆರವಣಿಗೆಯಲ್ಲಿ ಸಾಗುತ್ತಿದ್ದ ಹಲವು ಕಾರ್ಯಕರ್ತರ ಮೇಲೆ ವ್ಯವಸ್ಥಿತವಾಗಿ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣವೇ ಗುರುತಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗವು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !