July 26, 2026
Sunday, July 26, 2026
spot_img

ಕಾಮನ್‌ವೆಲ್ತ್‌ನಲ್ಲಿ ಮೀರಾಬಾಯಿ ಚಾನು ಮಿಂಚು: ದಾಖಲೆ ಮುರಿದು ಭಾರತಕ್ಕೆ ಮೊದಲ ಚಿನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಈ ಆವೃತ್ತಿಯ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.

ದಾಖಲೆಗಳ ಮಳೆ ಸುರಿಸಿದ ಮೀರಾಬಾಯಿ

ಮಣಿಪುರದ ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 85 ಕೆಜಿ ಮತ್ತು ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ ಎತ್ತುವ ಮೂಲಕ ಒಟ್ಟು 190 ಕೆಜಿ ಭಾರ ಎತ್ತಿದರು. ಈ ಸಾಧನೆಯೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಹಲವು ದಾಖಲೆಗಳನ್ನು ಮುರಿದರು.

ಸತತ ಮೂರನೇ ಚಿನ್ನದ ಸಾಧನೆ

ಇದು ಮೀರಾಬಾಯಿ ಚಾನು ಅವರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರನೇ ಚಿನ್ನದ ಪದಕವಾಗಿದೆ. ಆರಂಭಿಕ ಪ್ರಯತ್ನಗಳಲ್ಲಿ ಸಣ್ಣ ಎಡವಟ್ಟು ಕಂಡರೂ, ಬಳಿಕ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್‌ಗಳಂತೆ ಮಿಂಚಿದರು.

ಇದನ್ನೂ ಓದಿ:

ಪ್ರತಿಸ್ಪರ್ಧಿಗಳಿಗೆ ಸವಾಲಾದ ಪ್ರದರ್ಶನ

ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ ಒಟ್ಟು 168 ಕೆಜಿ ಎತ್ತಿ ಬೆಳ್ಳಿ ಪದಕ ಪಡೆದರೆ, ಮೀರಾಬಾಯಿ 22 ಕೆಜಿ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಏಷ್ಯನ್ ಗೇಮ್ಸ್‌ಗೆ ಸಿದ್ಧತೆ

ಚಿನ್ನ ಖಚಿತವಾದ ಬಳಿಕ ಮೂರನೇ ಪ್ರಯತ್ನವನ್ನು ಕೈಬಿಟ್ಟ ಮೀರಾಬಾಯಿ, ಮುಂಬರುವ ಏಷ್ಯನ್ ಗೇಮ್ಸ್‌ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !