July 29, 2026
Wednesday, July 29, 2026
spot_img

E20 ಪೆಟ್ರೋಲ್ ಬಗ್ಗೆ ಗೊಂದಲ ಬೇಡ: ಎಂಜಿನ್ ಅಲ್ಲ, ಈ ಭಾಗ ಬದಲಿಸಿದರೆ ಸಾಕು ಎಂದ ಸಚಿವ ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ E20 ಪೆಟ್ರೋಲ್ ಬಳಕೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, 2016ಕ್ಕೂ ಮೊದಲು ತಯಾರಿಸಲಾದ ಕೆಲವು BS-III ವಾಹನಗಳ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ.

ಇಂತಹ ವಾಹನಗಳಲ್ಲಿ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಸಾಮಾನ್ಯ ಸರ್ವಿಸ್ ವೇಳೆ ಬದಲಾಯಿಸಬೇಕಾಗಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಭಾರತೀಯ ತೈಲ ನಿಗಮ (IOCL), ARAI, IIP ಹಾಗೂ SIAM ನಡೆಸಿದ ಅಧ್ಯಯನಗಳ ಪ್ರಕಾರ, E20 ಇಂಧನ ಬಳಕೆಯಿಂದ ವಾಹನಗಳ ಎಂಜಿನ್ ಕಾರ್ಯಕ್ಷಮತೆ, ಚಾಲನಾ ಗುಣಮಟ್ಟ, ಸ್ಟಾರ್ಟಿಂಗ್, ಲೋಹ ಅಥವಾ ಪ್ಲಾಸ್ಟಿಕ್ ಭಾಗಗಳ ಮೇಲೆ ಯಾವುದೇ ಅಸಾಮಾನ್ಯ ಪರಿಣಾಮ ಕಂಡುಬಂದಿಲ್ಲ. ಹಳೆಯ BS-III ವಾಹನಗಳಲ್ಲಿ ಮಾತ್ರ ಕೆಲವು ರಬ್ಬರ್ ಭಾಗಗಳ ಬದಲಾವಣೆ ಅಗತ್ಯವಾಗಬಹುದು ಎಂದು ತಿಳಿಸಲಾಗಿದೆ.

E20 ಪೆಟ್ರೋಲ್ ಜಾರಿಗೂ ಮುನ್ನ ವ್ಯಾಪಕ ಪರೀಕ್ಷೆ ಹಾಗೂ ತಜ್ಞರ ಸಮಾಲೋಚನೆ ನಡೆಸಲಾಗಿದೆ ಎಂದು ಸರ್ಕಾರ ತಿಳಿಸಿದ್ದು, ಇಂಧನ ಮಿಶ್ರಣ ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !