ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟ್ರಾಫಿಕ್‌ಗೆ ಶಾಪ ಹಾಕದೇ ಇರುವವರೇ ಇಲ್ಲ. ಈ ಸಾಲಿಗೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕೂಡ ಸೇರಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒ ಕನ್ವೆನ್ಷನ್ ಸೆಂಟರ್‌ನಲ್ಲಿ ಎ.ಆರ್. ರೆಹಮಾನ್ ಅವರ ‘ದಿ ವಂಡರ್‌ಮೆಂಟ್ ಟೂರ್’ ಲೈವ್ ಮ್ಯೂಸಿಕ್ ಕಾನ್ಸರ್ಟ್ ಆಯೋಜನೆಗೊಂಡಿತ್ತು.
ಇದನ್ನು ಮುಗಿಸಿ ವಾಪಾಸಾಗುವ ವೇಳೆ ಎ.ಆರ್ ರೆಹಮಾನ್ ಅವರು ʼಬೆಂಗಳೂರಿನ ಪ್ರಮುಖ ಆಕರ್ಷಣೆʼ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಿಂದೆಂದೂ ಇಷ್ಟೊಂದು ಟ್ರಾಫಿಕ್ ನೋಡೇ ಇಲ್ಲವೇನೋ ಎನ್ನುವಂತೆ ರೆಹಮಾನ್ ಕಾಣಿಸಿಕೊಂಡಿದ್ದಾರೆ. ಕಾರಿನೊಳಗೆ ಕುಳಿತಿದ್ದ ರೆಹಮಾನ್ ಅವರನ್ನು ಅಭಿಮಾನಿಗಳು ಗುರುತಿಸಿ ಟ್ರಾಫಿಕ್ ಮಧ್ಯೆಯೂ ಫೋಟೊ ತೆಗೆಸಿಕೊಳ್ಳಲು ಆಗಮಿಸಿದ್ದಾರೆ.
ಅಭಿಮಾನಿಗಳಿಗೆ ಏನೂ ಹೇಳಲಾಗದೇ, ಟ್ರಾಫಿಕ್‌ನ ಫ್ರಸ್ಟ್ರೇಷನ್ ತೋರಿಸಲಾಗದೇ ರೆಹಮಾನ್ ದೊಡ್ಡದೊಂದ ಸ್ಮೈಲ್ ಮಾಡಿ ಸುಮ್ಮನಾಗಿದ್ದಾರೆ. ಅಶ್ವಿನಿ ರೋಜಾ ಎನ್ನುವ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ರೆಹಮಾನ್ ಅವರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ನೀವು ಲಕ್ಕಿ ರೆಹಮಾನ್ ಅವರು ಹತ್ತಿರದಲ್ಲಿಯೇ ಕಾಣಿಸಿದ್ದಾರೆ, ಕೆಲವೊಮ್ಮೆ ಎಣಿಸಿರದ ಘಟನೆಗಳು ನಡೆಯೋದು ಬೆಂಗಳೂರು ಟ್ರಾಫಿಕ್‌ನಲ್ಲೇ, ಟ್ರಾಫಿಕ್ ಜಾಮ್‌ನಿಂದ ನಿಮಗೊಬ್ಬರಿಗೇ ಲಾಭ ಆಗಿದ್ದು ಎಂದು ಜನ ಪೋಸ್ಟ್ ಮೇಲೆ ಕಮೆಂಟ್ ಮಾಡುತ್ತಿದ್ದಾರೆ.



