ಹೊಸದಿಗಂತ ವರದಿ ಕಾರವಾರ:
ಗಣೇಶೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ರೈಲು ಸಂಖ್ಯೆ 09013/09014 ಮುಂಬೈ ಸೆಂಟ್ರಲ್ ನಿಂದ ತೋಕೂರಿಗೆ ವೀಕ್ಲಿ ಸ್ಪೆಷಲ್ ರೈಲು ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಂಚರಿಸಲಿದೆ.
09013 ಮುಂಬೈ ಸೆಂಟ್ರಲ್–ತೋಕೂರು ವಿಶೇಷ ರೈಲು ಸೆಪ್ಟೆಂಬರ್ 15ರಂದು ರಾತ್ರಿ 10.45ಕ್ಕೆ ಮುಂಬೈ ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.50ಕ್ಕೆ ತೋಕೂರು ತಲುಪಲಿದೆ.
09014 ತೋಕೂರು–ಮುಂಬೈ ಸೆಂಟ್ರಲ್ ವಿಶೇಷ ರೈಲು ಸೆಪ್ಟೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ತೋಕೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 7.40ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ.
ಈ ರೈಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋಕರ್ಣ ರೋಡ್, ಕುಮಟಾ ಹಾಗೂ ಮುರುಡೇಶ್ವರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಹೀಗಾಗಿ ಗಣೇಶೋತ್ಸವಕ್ಕಾಗಿ ಮುಂಬೈ ಭಾಗದಿಂದ ಉತ್ತರ ಕನ್ನಡಕ್ಕೆ ಆಗಮಿಸುವ ಹಾಗೂ ಹಬ್ಬದ ಬಳಿಕ ಮುಂಬೈಗೆ ಮರಳುವ ಪ್ರಯಾಣಿಕರಿಗೆ ವಿಶೇಷ ರೈಲು ಸೇವೆಯಿಂದ ಅನುಕೂಲವಾಗಲಿದೆ.
ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಹೊಂದಿರಲಿದ್ದು ಇದರಲ್ಲಿ 3 ತ್ರಿ-ಟೈರ್ ಎಸಿ ಬೋಗಿಗಳು,15 ಸ್ಲೀಪರ್ ಬೋಗಿಗಳು, 2 ಸಾಮಾನ್ಯ ಬೋಗಿಗಳು ಹಾಗೂ 2 ಎಸ್‌ಎಲ್‌ಆರ್ ಬೋಗಿಗಳು ಇರಲಿವೆ.
ಇದನ್ನೂ ಓದಿ:
ರೈಲು ಬೋರಿವಲಿ, ವಸಾಯಿ ರೋಡ್, ಭಿವಂಡಿ ರೋಡ್, ಪನ್ವೆಲ್, ಪೆಣ್, ರೋಹಾ, ಮಾಂಗಾಂವ್, ವೀರ್, ಖೇಡ್, ಚಿಪ್ಳೂಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಾಪುರ ರೋಡ್, ವೈಭವವಾಡಿ ರೋಡ್, ಕಣಕವಲಿ, ಸಿಂಧುದುರ್ಗ್, ಕುಡಾಳ, ಸಾವಂತವಾಡಿ ರೋಡ್, ತಿವಿಮ್, ಕಾರ್ಮಳಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ನಿಗದಿತ ವಿಶೇಷ ರೈಲುಗಳ ಕಾಯ್ದಿರಿಸುವಿಕೆ ಪ್ರಯಾಣಿಕರ ಕಾಯ್ದಿರಿಸುವಿಕೆ ಈಗಾಗಲೇ ಆರಂಭಗೊಂಡಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.



