October 12, 2026
Monday, October 12, 2026
spot_img

ಸಮೀರ್‌ ಮೊಬೈಲ್‌ ತನಿಖೆಯಲ್ಲಿ ಆಘಾತಕಾರಿ ಮಾಹಿತಿ; ಪಾಕ್‌ ಮೂಲದ ಖಾತೆಗಳ ಜೊತೆ ಸಂಪರ್ಕ ಶಂಕೆ

ಹೊಸದಿಗಂತ ವರದಿ ಕಲಬುರಗಿ:

ಪಾಕಿಸ್ತಾನದೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ಶಂಕೆಯಲ್ಲಿ ಬಂಧಿತನಾಗಿರುವ ಸಮೀರ್ ಪ್ರಕರಣದಲ್ಲಿ ಮತ್ತಷ್ಟು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.ತನಿಖೆ ವೇಳೆ ಸಮೀರ್ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳ ಬಳಕೆ ಮಾಡಿಕೊಂಡು ವಾಟ್ಸ್ಆಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಹಲವರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪಾಕಿಸ್ತಾನ ಮೂಲದ ಕೆಲವು ಶಂಕಿತ ವ್ಯಕ್ತಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಖಾತೆಗಳೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ಲಭ್ಯವಾಗಿದೆ. ಸಮೀರ್ ಮೊಬೈಲ್ ಪರಿಶೀಲನೆ ವೇಳೆ ದೇಶವಿರೋಧಿ ವಿಡಿಯೋಗಳು, ಭಯೋತ್ಪಾದಕ ಸಂಘಟನೆಗಳ ಫೋಟೋಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕವಾಗಿ ತೋರಿಸುವ ವಿಡಿಯೋಗಳು, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ರೀತಿಯ ವಿಷಯಗಳು ಹಾಗೂ ಹಲವು ಶಂಕಿತ ವಾಟ್ಸ್ಆಪ್ ಗುಂಪುಗಳ ಸದಸ್ಯತ್ವದ ಮಾಹಿತಿ ದೊರೆತಿದೆ. ಸಮೀರ್ ಸುಮಾರು 20ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಖಾತೆಗಳನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಪ್ರಕರಣದ ಕುರಿತು ತನಿಖಾ ಸಂಸ್ಥೆಗಳು ಮತ್ತಷ್ಟು ಮಾಹಿತಿ ಕಲೆಹಾಕುತ್ತಿವೆ.

Must Read