October 12, 2026
Monday, October 12, 2026
spot_img

ಎನ್‌ಸಿಆರ್‌ ಪ್ರಕರಣದ ಇತ್ಯರ್ಥಕ್ಕೆ ಲಂಚದ ಬೇಡಿಕೆ : ಹಳೇಬೀಡು ಪಿಎಸ್‌ಐ ಲೋಕಾ ಬಲೆಗೆ

ಹೊಸದಿಗಂತ ವರದಿ ಹಾಸನ:

ಎನ್‌ಸಿಆರ್ ಪ್ರಕರಣವನ್ನು ಇತ್ಯರ್ಥಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಳೇಬೀಡು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಮಂಜುನಾಥ್ ಅವರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನವೀನ ಎಂಬುವವರಿಂದ ಎನ್‌ಸಿಆರ್ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಡುವ ಸಲುವಾಗಿ ಪಿಎಸ್‌ಐ ಮಂಜುನಾಥ್ ಒಟ್ಟು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮುಂಗಡ ಹಣವಾಗಿ ಇಪ್ಪತ್ತು ಸಾವಿರ ರೂಪಾಯಿ ಪಡೆಯುವಾಗ ಹೋಟೆಲ್‌ನಲ್ಲಿ ಅವರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಇನ್ಸ್ಪೆಕ್ಟರ್‌ಗಳಾದ ಶಿಲ್ಪಾ ಹಾಗೂ ಗವಿರಾಜು ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹಣದ ಸಮೇತ ಆರೋಪಿ ಪಿಎಸ್‌ಐ ಮಂಜುನಾಥ್‌ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read