ಮಕ್ಕಳಿಗೆ ಸಂಜೆ ಏನಾದರೂ ಸ್ನ್ಯಾಕ್ಸ್ ಬೇಕು ಅಂದಾಗ ಹೊರಗಿನ ಜಂಕ್ ಫುಡ್ ಕೊಡುವ ಬದಲು, ಮನೆಯಲ್ಲೇ ಈ ಹೆಲ್ದೀ ಪನೀರ್ ಪಾಪ್‌ಕಾರ್ನ್ ಮಾಡಿಕೊಡಿ. ಪ್ರೋಟೀನ್‌ನಿಂದ ತುಂಬಿರುವ ಪನೀರ್ ಮತ್ತು ಮೈದಾ ಬಳಸದೆ ಮಾಡುವ ಈ ಕ್ರಿಸ್ಪಿ ತಿಂಡಿಯನ್ನು ಮಕ್ಕಳು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು
ಪನೀರ್
ಗೋಧಿ ಹಿಟ್ಟು
ಕಾರ್ನ್ ಫ್ಲೋರ್
ಖಾರದ ಪುಡಿ ಮತ್ತು ಉಪ್ಪು
ಕಾಳುಮೆಣಸಿನ ಪುಡಿ
ಓಟ್ಸ್ ಪುಡಿ ಅಥವಾ ಅವಲಕ್ಕಿ ಪುಡಿ
ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ. ಸ್ವಲ್ಪ ನೀರು ಸೇರಿಸಿ ದಪ್ಪನೆಯ ಹಿಟ್ಟು ಮಾಡಿಕೊಳ್ಳಬೇಕು. ಈಗ ಪನೀರ್ ಚೂರುಗಳನ್ನು ಈ ಹಿಟ್ಟಿನಲ್ಲಿ ಅದ್ದಿ, ನಂತರ ಓಟ್ಸ್ ಪುಡಿ ಅಥವಾ ಅವಲಕ್ಕಿ ಪುಡಿಯಲ್ಲಿ ಚೆನ್ನಾಗಿ ಹೊರಳಿಸಿ. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿ. ಕೋಟಿಂಗ್ ಮಾಡಿದ ಪನೀರ್ ಚೂರುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿದರೆ, ಬಿಸಿಬಿಸಿಯಾದ ಮತ್ತು ಹೆಲ್ದೀ ಪನೀರ್ ಪಾಪ್‌ಕಾರ್ನ್ ಸಿದ್ಧ.



