ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿದ್ದ ಬಾಲಿವುಡ್ನ ರೊಮ್ಯಾಂಟಿಕ್ ಡ್ರಾಮಾ ‘ಕಾಕ್ಟೇಲ್ 2’ ಇದೀಗ ಒಟಿಟಿ ಪ್ರೇಕ್ಷಕರಿಗೆ ಲಭ್ಯವಾಗಿದೆ. ಶಾಹಿದ್ ಕಪೂರ್, ಕೃತಿ ಸನನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಆಗಸ್ಟ್ 14ರಿಂದ ನೆಟ್ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ನೆಟ್ಫ್ಲಿಕ್ಸ್ನಲ್ಲಿ ‘ಕಾಕ್ಟೇಲ್ 2’ ವೀಕ್ಷಿಸಿ
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸುಮಾರು ಎರಡು ತಿಂಗಳ ಬಳಿಕ ‘ಕಾಕ್ಟೇಲ್ 2’ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬಂದಿದೆ. ನೆಟ್ಫ್ಲಿಕ್ಸ್ ಇಂಡಿಯಾ ಕೂಡ ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ಒಟಿಟಿ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ.
ಶಾಹಿದ್-ರಶ್ಮಿಕಾ ಜೋಡಿಗೆ ಕೃತಿ ಸನನ್ ಎಂಟ್ರಿ
ಹೋಮಿ ಅದಜಾನಿಯಾ ನಿರ್ದೇಶನದ ಈ ಸಿನಿಮಾದ ಕಥೆ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಿರ್ವಹಿಸಿರುವ ಪಾತ್ರಗಳ ಸುತ್ತ ಸಾಗುತ್ತದೆ. ಪ್ರೀತಿಯಲ್ಲಿದ್ದರೂ ಮದುವೆಯ ವಿಚಾರದಲ್ಲಿ ಗೊಂದಲದಲ್ಲಿರುವ ಜೋಡಿಯ ಜೀವನಕ್ಕೆ ಕೃತಿ ಸನನ್ ಪಾತ್ರ ಪ್ರವೇಶಿಸಿದ ಬಳಿಕ ಕಥೆಯಲ್ಲಿ ಹಲವು ಭಾವನಾತ್ಮಕ ತಿರುವುಗಳು ಎದುರಾಗುತ್ತವೆ.
ಇದನ್ನೂ ಓದಿ:
ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ
ಜೂನ್ 19ರಂದು ಬಿಡುಗಡೆಯಾದ ‘ಕಾಕ್ಟೇಲ್ 2’ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಥೆಯ ನಿರೂಪಣೆ ಹಾಗೂ ವೇಗದ ಕುರಿತು ಕೆಲವು ಟೀಕೆಗಳು ಕೇಳಿಬಂದಿದ್ದರೂ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.
100 ಕೋಟಿ ದಾಟಿದ ಕಲೆಕ್ಷನ್
ವರದಿಗಳ ಪ್ರಕಾರ, ಭಾರತದಲ್ಲಿ ಮೊದಲ ದಿನವೇ ಸಿನಿಮಾ ಸುಮಾರು 13 ಕೋಟಿ ನೆಟ್ ಗಳಿಸಿತ್ತು. ಮೊದಲ ವಾರಾಂತ್ಯದಲ್ಲಿ ಸುಮಾರು 47 ಕೋಟಿ ಗಳಿಸಿದ ಚಿತ್ರ, ದೇಶೀಯ ಮಾರುಕಟ್ಟೆಯಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಸುಮಾರು 147 ಕೋಟಿ ಗಳಿಸುವ ಮೂಲಕ ಗಮನ ಸೆಳೆದಿದೆ.



