August 14, 2026
Friday, August 14, 2026
spot_img

IFFM 2026: ರಿಷಬ್ ಶೆಟ್ಟಿಗೆ ಡಬಲ್ ಗೌರವ, ದುಲ್ಕರ್ ಸಲ್ಮಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಪ್ರತಿಭೆ ಮತ್ತು ವೈವಿಧ್ಯಮಯ ಕಥನಗಳಿಗೆ ಗೌರವ ಸಲ್ಲಿಸುವ 17ನೇ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ನಲ್ಲಿ ಈ ಬಾರಿ ಹಲವು ತಾರೆಯರು ಪ್ರಶಸ್ತಿ ಗೆದ್ದಿದ್ದಾರೆ. ಕನ್ನಡದ ರಿಷಬ್ ಶೆಟ್ಟಿ, ಮಲಯಾಳಂ ನಟ ದುಲ್ಕರ್ ಸಲ್ಮಾನ್, ನಟಿ ಕೀರ್ತಿ ಕುಲ್ಹಾರಿ ಸೇರಿದಂತೆ ಹಲವು ಪ್ರಮುಖ ಹೆಸರುಗಳು ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ರಿಷಬ್ ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ಭಾರತೀಯ ಸಿನಿಮಾಗೆ ನೀಡಿರುವ ಕೊಡುಗೆ ಹಾಗೂ ಸ್ಥಳೀಯ ಸಂಸ್ಕೃತಿ ಮತ್ತು ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಿದ ಹಿನ್ನೆಲೆಯಲ್ಲಿ ಅವರಿಗೆ ‘ಲೀಡರ್‌ಶಿಪ್ ಇನ್ ಸಿನಿಮಾ’ ಗೌರವವನ್ನೂ ನೀಡಲಾಗಿದೆ.

ಹಿರಿಯ ಕಲಾವಿದರಿಗೆ ವಿಶೇಷ ಗೌರವ

ಬಾಲಿವುಡ್‌ನ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಗೌರವ ನೀಡಲಾಗಿದೆ. ಇದೇ ವೇಳೆ ರಾಣಿ ಮುಖರ್ಜಿ ಅವರ ಮೂರು ದಶಕಗಳ ಸಿನಿಪಯಣವನ್ನು ವಿಶೇಷವಾಗಿ ಗುರುತಿಸಲಾಗಿದೆ. ನಟ ಪಂಕಜ್ ತ್ರಿಪಾಠಿ ಅವರಿಗೆ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿ ದೊರೆತಿದೆ.

IFFM 2026 ಪ್ರಮುಖ ಪ್ರಶಸ್ತಿ ವಿಜೇತರು

ಅತ್ಯುತ್ತಮ ನಟ: ದುಲ್ಕರ್ ಸಲ್ಮಾನ್ – ಕಾಂತಾ
ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ – ಕಾಂತಾರ: ಚಾಪ್ಟರ್ 1
ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸೈಯಾರಾ
ಅತ್ಯುತ್ತಮ ನಟಿ: ಕೀರ್ತಿ ಕುಲ್ಹಾರಿ – ಫುಲ್ ಪ್ಲೇಟ್
ಅತ್ಯುತ್ತಮ ಸಿನಿಮಾ: ಲೋಕಾ ಚಾಪ್ಟರ್ 1: ಚಂದ್ರ
ರೈನ್‌ಬೋ ಸ್ಟೋರಿಟೆಲ್ಲರ್ ಪ್ರಶಸ್ತಿ: ಲಾಲಾ ಅಂಡ್ ಪಾಪಿ
ಅತ್ಯುತ್ತಮ ಸಾಕ್ಷ್ಯಚಿತ್ರ: ಫ್ಲೈಯಿಂಗ್ ಟೈಗರ್ಸ್ – ಮಧುಶ್ರೀ ದತ್ತಾ
ಇಂಡಿ ಸಿನಿಮಾ – ವಿಶೇಷ ಉಲ್ಲೇಖ: ಕಿಕ್ಕ್ರನ್ ದೇ ಫುಲ್
ಅತ್ಯುತ್ತಮ ಇಂಡಿ ಸಿನಿಮಾ: ನಾಟ್ ಎ ಹೀರೊ
ವಿಶೇಷ ಉಲ್ಲೇಖ: ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ

ವೆಬ್ ಸರಣಿಗಳಲ್ಲೂ ಸ್ಟಾರ್‌ಗಳ ಗೆಲುವು

ವೆಬ್ ಸರಣಿ ವಿಭಾಗದಲ್ಲಿ ವಿಜಯ್ ವರ್ಮಾ (ಮಟ್ಕಾ ಕಿಂಗ್) ಅತ್ಯುತ್ತಮ ನಟ ಹಾಗೂ ರಸಿಕಾ ದುಗ್ಗಲ್ (ದೆಹಲಿ ಕ್ರೈಮ್ ಸೀಸನ್ 3) ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಫ್ರೀಡಮ್ ಅಟ್ ಮಿಡ್‌ನೈಟ್ – ಸೀಸನ್ 2’ ಅತ್ಯುತ್ತಮ ಸರಣಿ ಪ್ರಶಸ್ತಿಗೆ ಆಯ್ಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !