August 21, 2026
Friday, August 21, 2026
spot_img

ಭಾರತ ವಿರುದ್ಧದ 2ನೇ ಟೆಸ್ಟ್‌ಗೆ ಶ್ರೀಲಂಕಾ ತಂಡ ಪ್ರಕಟ; ಗಾಯದ ಸಮಸ್ಯೆಯಿಂದ ಮೆಂಡಿಸ್ ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಪ್ರಸ್ತುತ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಆಗಸ್ಟ್ 23 ರಿಂದ ಕೊಲಂಬೊದ ಪ್ರಸಿದ್ಧ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಸರಣಿಯಲ್ಲಿ ಜಯ ಸಾಧಿಸುವ ಭರವಸೆಯೊಂದಿಗೆ ಕಣಕ್ಕಿಳಿಯಲಿವೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಶ್ರೀಲಂಕಾ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೊಲಂಬೊ ಪಂದ್ಯಕ್ಕಾಗಿ ಆತಿಥೇಯ ಶ್ರೀಲಂಕಾ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಇಬ್ಬರು ತಾರೆಯರ ದಿಢೀರ್ ಸೇರ್ಪಡೆ

ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಮಿಲ್ ಮಿಶಾರ ಮತ್ತು ಸಹನ್ ಅರಾಚಿಗೆ ಅವರಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಪ್ರದರ್ಶಿಸುತ್ತಿರುವ ಅದ್ಭುತ ಆಟವೇ ಇವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣವಾಗಿದೆ.

ಗಾಯದ ಸಮಸ್ಯೆಯಿಂದ ಶ್ರೀಲಂಕಾ ತತ್ತರ

ಶ್ರೀಲಂಕಾ ಕ್ಯಾಂಪ್‌ನಲ್ಲಿ ಆಟಗಾರರ ಗಾಯದ ಸಮಸ್ಯೆ ಹೆಚ್ಚುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿಯೇ ತಂಡದಲ್ಲಿ ಹೊಸ ಬದಲಾವಣೆಗಳು ಅನಿವಾರ್ಯವಾಗಿದ್ದವು. ಕಮಿಂದು ಮೆಂಡಿಸ್ ಮಂಡಿರಜ್ಜು ಸ್ನಾಯು ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಪಾಥುಮ್ ನಿಸ್ಸಂಕಾ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಇವರು ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ದಿನೇಶ್ ಚಾಂಡಿಮಲ್ ಮೊದಲ ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಇವರನ್ನು ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ.

ದ್ವಿತೀಯ ಟೆಸ್ಟ್‌ಗೆ ಶ್ರೀಲಂಕಾ ಅಧಿಕೃತ ತಂಡ

ಧನಂಜಯ ಡಿ ಸಿಲ್ವಾ (ನಾಯಕ), ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಸಹನ್ ಅರಾಚ್ಚಿಗೆ, ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕೆ, ಲಹಿರು ಕುಮಾರ, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ.

ಇದನ್ನೂ ಓದಿ:

ಮೊದಲ ಪಂದ್ಯ ಗೆದ್ದು ಬೀಗಿದ್ದ ಭಾರತ

ಎರಡು ಪಂದ್ಯಗಳ ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 165 ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಶುಭಮನ್ ಗಿಲ್ ನೇತೃತ್ವದ ಯುವ ಭಾರತೀಯ ಪಡೆ ಗ್ಯಾಲೆ ಮೈದಾನದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಆತಿಥೇಯರನ್ನು ಮಣಿಸಿತ್ತು. ಇದೀಗ ಶ್ರೀಲಂಕಾ ತಂಡವು ಸರಣಿಯನ್ನು ಸಮಬಲ ಮಾಡಿಕೊಳ್ಳುವ ಒತ್ತಡದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !