August 22, 2026
Saturday, August 22, 2026
spot_img

ನಕಲಿ ಪನೀರ್ ಗೆ ಬಿತ್ತು ಬ್ರೇಕ್, ಇನ್ಮೇಲೆ ಸಿಗುತ್ತೆ ಪಕ್ಕಾ ಅಸಲಿ ಪನೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಜನರಿಗೆ ಪನೀರ್ ಅಂದ್ರೆ ಪ್ರಾಣ! ಪನೀರ್ ಬಟರ್ ಮಸಾಲಾ, ಪನೀರ್ ಟಿಕ್ಕಾ ಅಂತ ಹೋಟೆಲ್‌ಗಳಲ್ಲಿ ಇಷ್ಟಪಟ್ಟು ತಿನ್ನೋ ಪನೀರ್ ಪ್ರಿಯರ ಆರೋಗ್ಯ ಕಾಯೋಕೆ ನಮ್ಮ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಸೂಪರ್ ಆಗಿರೋ ನಿರ್ಧಾರ ತಗೊಂಡಿದೆ. ಇನ್ಮುಂದೆ ಜನರಿಗೆ ಪಕ್ಕಾ ಕ್ವಾಲಿಟಿ ಇರೋ ಶುದ್ಧ ಪನೀರ್ ಸಿಗಬೇಕು ಅಂತ ಸರ್ಕಾರ ಕಟ್ಟುನಿಟ್ಟಿನ ರೂಲ್ಸ್ ತಂದಿದೆ.

ಏನಿದು ಹೊಸ ನಿರ್ಧಾರ?

ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೃತಕವಾಗಿ (ಅನಲಾಗ್) ತಯಾರಿಸೋ ಡುಪ್ಲಿಕೇಟ್ ಪನೀರ್ ಬಳಸೋದನ್ನ ಇಡೀ ಒಂದು ವರ್ಷದ ಮಟ್ಟಿಗೆ ಸರ್ಕಾರ ಪೂರ್ತಿಯಾಗಿ ಬ್ಯಾನ್ ಮಾಡಿದೆ. ಜನರು ಹೊಟೇಲ್ ಗೆ ಹೋಗಿ ದುಡ್ಡು ಕೊಟ್ಟು ತಿಂದಮೇಲೆ ಅವರಿಗೆ ಪೌಷ್ಟಿಕಾಂಶ ಇರೋ ಆಹಾರವೇ ಸಿಗಬೇಕು ಅನ್ನೋದು ಸರ್ಕಾರದ ಆಶಯ.

ಅಸಲಿ ಪನ್ನೀರ್‌ನಿಂದ ಏನೇನು ಲಾಭ?

ನಿಜವಾದ ಪನೀರ್ ಸಂಪೂರ್ಣವಾಗಿ ಶುದ್ಧ ಹಾಲಿನಿಂದ ಮಾತ್ರ ತಯಾರಾಗುತ್ತೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಆರೋಗ್ಯಕ್ಕೆ ಬೇಕಾಗುವ ಒಳ್ಳೇ ಪೌಷ್ಟಿಕಾಂಶಗಳು ಸಮೃದ್ಧವಾಗಿರುತ್ತವೆ.

ಸಸ್ಯಜನ್ಯ ಎಣ್ಣೆ ಅಥವಾ ಕೆಮಿಕಲ್ ಮಿಕ್ಸ್ ಮಾಡಿರೋ ಕೃತಕ ಪನೀರ್ ಗೆ ಗುಡ್‌ಬೈ ಹೇಳೋದ್ರಿಂದ, ಜನರ ಹೊಟ್ಟೆಗೆ ಯಾವುದೇ ತೊಂದರೆ ಆಗಲ್ಲ. ಪ್ರತಿಯೊಬ್ಬರ ಆರೋಗ್ಯವೂ ಚನ್ನಾಗಿರುತ್ತೆ.

ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ!

ಆಹಾರ ಇಲಾಖೆಯ ಅಧಿಕಾರಿಗಳು ರಾಜ್ಯದ ಎಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ಡೈರಿಗಳ ಮೇಲೆ ಕಣ್ಣಿಟ್ಟಿದ್ದು, ಎಲ್ಲೂ ಕಳಪೆ ಪನೀರ್ ಮಾರಾಟ ಆಗದಂತೆ ತಪಾಸಣೆ ನಡೆಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !