August 23, 2026
Sunday, August 23, 2026
spot_img

SHOCKING | ರೇಸಿಂಗ್ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ತಮಿಳು ನಟ ಅಜಿತ್ ಕುಮಾರ್ ಅವರು ಯುರೋಪ್‌ನಲ್ಲಿ ನಡೆದ ಹೈ-ಸ್ಪೀಡ್ ಕಾರು ರೇಸಿಂಗ್ ಸ್ಪರ್ಧೆಯ ವೇಳೆ ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ. ರೇಸ್ ನಡೆಯುತ್ತಿದ್ದಾಗ ಅವರ ರೇಸಿಂಗ್ ಕಾರ್ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಈ ಭೀಕರ ಅಪಘಾತದಲ್ಲೂ ಅಜಿತ್ ಕುಮಾರ್ ಅವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೆ ಕಾರಣವೇನು?

ಅಂತಾರಾಷ್ಟ್ರೀಯ ಮಟ್ಟದ ‘ಏಷ್ಯನ್ ಲೆ ಮ್ಯಾನ್ಸ್’ ಮತ್ತು ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ಎಂಡ್ಯೂರೆನ್ಸ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಜಿತ್ ಪಾಲ್ಗೊಂಡಿದ್ದರು. ವರದಿ ಪ್ರಕಾರ, ರೇಸಿಂಗ್ ವೇಳೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಆದರೆ ರೇಸಿಂಗ್ ಸುರಕ್ಷತಾ ಕವಚಗಳ ಕಾರಣದಿಂದಾಗಿ ಅಜಿತ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗುತ್ತಿದೆ.‌

ಅಜಿತ್ ಕುಮಾರ್‌ಗೆ ಇದು ಮೊದಲಲ್ಲ

ರೇಸಿಂಗ್ ಟ್ರ್ಯಾಕ್‌ನಲ್ಲಿ ಅಜಿತ್ ಕುಮಾರ್ ಅವರಿಗೆ ಅಪಘಾತಗಳು ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಹಲವು ಬಾರಿ ಅಪಾಯದಿಂದ ಪಾರಾಗಿದ್ದಾರೆ. 2025ರಲ್ಲಿಇಟಲಿಯಲ್ಲಿ ನಡೆದ ಜಿಟಿ4 ಯುರೋಪಿಯನ್ ಸರಣಿಯ ವೇಳೆ ಅವರ ಕಾರು ಕ್ರ್ಯಾಶ್ ಆಗಿತ್ತು. ನಂತರ ಸದೇ ವರ್ಷ ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ಪೋರ್ಷೆ ಸ್ಪ್ರಿಂಟ್ ಚಾಲೆಂಜ್‌ನಲ್ಲಿ ಅವರ ಕಾರು ಎರಡು ಬಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಿತ್ತು. ದುಬೈ 24H ರೇಸ್‌ನ ಅಭ್ಯಾಸದ ವೇಳೆಯೂ ಅವರ ಪೋರ್ಷೆ ಕಾರು ಅಪಘಾತಕ್ಕೀಡಾಗಿತ್ತು. ಈ ಎಲ್ಲಾ ಘಟನೆಗಳಲ್ಲೂ ಅಜಿತ್ ಅವರು ಅದೃಷ್ಟವಶಾತ್ ಸುರಕ್ಷಿತವಾಗಿ ಹೊರಬಂದಿದ್ದರು.

ನಟನಾಗಿರುವುದರಿಂದಲೇ ಹೆಡ್‌ಲೈನ್ ಆಗುತ್ತದೆ: ಅಜಿತ್

ಕಳೆದ ವರ್ಷ ನೀಡಿದ್ದ ಸಂದರ್ಶನವೊಂದರಲ್ಲಿ ಅಪಘಾತಗಳ ಬಗ್ಗೆ ಮಾತನಾಡಿದ್ದ ಅಜಿತ್, ಕಾರು ಕ್ರ್ಯಾಶ್ ಆದಾಗ ನನಗೆ ಗಾಯವಾಗಿದೆಯೇ, ಕಾರನ್ನು ಮತ್ತೆ ಸ್ಟಾರ್ಟ್ ಮಾಡಬಹುದೇ ಎಂದು ನಾನು ಮೊದಲು ನೋಡುತ್ತೇನೆ. ರೇಸ್ ಮುಗಿಸಲೇಬೇಕು ಎಂಬ ಹಠ ನನ್ನದಾಗಿರುತ್ತದೆ. ಆದರೆ, ನನ್ನ ರೇಸಿಂಗ್‌ನಿಂದಾಗಿ ಕುಟುಂಬದವರು ಪಡುವ ಆತಂಕದ ಬಗ್ಗೆ ನನಗೆ ಚಿಂತೆಯಿರುತ್ತದೆ. ನನ್ನಂತೆಯೇ ಬೇರೆ ರೇಸರ್‌ಗಳಿಗೂ ಅಪಘಾತಗಳಾಗುತ್ತವೆ. ಆದರೆ ನಾನು ಸಿನಿಮಾ ನಟನಾಗಿರುವುದರಿಂದ ನನ್ನ ಅಪಘಾತಗಳು ದೊಡ್ಡ ಹೆಡ್‌ಲೈನ್ ಆಗುತ್ತವೆ ಅಷ್ಟೇ, ಎಂದು ಹೇಳಿದ್ದರು.

ಇದನ್ನೂ ಓದಿ:

ಅಂತಾರಾಷ್ಟ್ರೀಯ ಮಟ್ಟದ ಫಾರ್ಮುಲಾ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕೆಲವೇ ನಟರಲ್ಲಿ ಅಜಿತ್ ಕುಮಾರ್ ಪ್ರಮುಖರಾಗಿದ್ದಾರೆ. ಸದ್ಯ ಸಿನಿಮಾಗಳತ್ತ ಬರುವುದಾದರೆ, ಅಜಿತ್ ಅವರು ಮುಂದಿನ ದಿನಗಳಲ್ಲಿ ಆದಿಕ್ ರವಿಚಂದ್ರನ್ ನಿರ್ದೇಶನದ ‘ಡೇರ್‌ಡೆವಿಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !