August 28, 2026
Friday, August 28, 2026
spot_img

ಇಂದು ನಾಡಿನಾದ್ಯಂತ ರಕ್ಷಾಬಂಧನ ಸಂಭ್ರಮ: ಶುಭ ಮಹೂರ್ತ ಯಾವುದು? ಪೂಜಾ ತಟ್ಟೆಯಲ್ಲಿ ಏನೆಲ್ಲಾ ಇರಬೇಕು?

ನಾಡಿನಾದ್ಯಂತ ರಕ್ಷಾಬಂಧನ ಸಂಭ್ರಮ ಆರಂಭವಾಗಿದ್ದು, ದೂರ ದೂರದಲ್ಲಿರುವ ಸಹೋದರ ಸಹೋದರಿಯರು ಮತ್ತೆ ಒಂದಾಗಿದ್ದಾರೆ. ಸದಾ ರಕ್ಷಿಸು ಎಂದು ಸಹೋದರಿಯು ಸಹೋದರನಿಗೆ ರಕ್ಷಾಬಂಧನವನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾಳೆ. ಕಾಲ ಬದಲಾದಂತೆ ಆಚರಣೆಗಳ ಮಹತ್ವವೂ ಬದಲಾಗುತ್ತಾ ಹೋಗುತ್ತದೆ. ಸಾಮಾಜಿಕ ಮಾಧ್ಯಮಗಳಿಂದ ರಾಖಿ ಹಬ್ಬ ಮನೆಮನೆಗೂ ತಲುಪಿದ್ದು, ಪ್ರತಿಯೊಬ್ಬರು ರಾಖಿ ಕಟ್ಟಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಾರೆ.

ರಕ್ಷಾಬಂಧನ ಮಹೂರ್ತ ಯಾವಾಗ?

ರಾಖಿ ಕಟ್ಟಲು ಶುಭ ಸಮಯ: ಬೆಳಗ್ಗೆ 05:57 ರಿಂದ 09:48 ರವರೆಗೆ
ಈ ಸಮಯದಲ್ಲಿ ರಾಖಿ ಕಟ್ಟಬೇಡಿ: ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:28 ರವರೆಗೆ

ವಿಧಾನ ಹೇಗೆ?

ತಮ್ಮ ಪ್ರೀತಿಯ ಸಹೋದರನಿಗೆ ರಾಖಿ ಕಟ್ಟುವ ಮುನ್ನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ದೇವರಿಗೆ ಪೂಜೆ ಮಾಡಿ. ಈ ವೇಳೆ ತಟ್ಟೆಯಲ್ಲಿ ದೀಪ, ಕುಂಕುಮ, ಅಕ್ಷತೆ, ಸಿಹಿ ತಿಂಡಿ ಹಾಗೂ ರಾಖಿಯನ್ನು ಇಟ್ಟು ಪೂಜೆ ಮಾಡಿ.

ಆನಂತರ ಸಹೋದರನಿಗೆ ತಿಲಕವಿಟ್ಟು ಹಣೆಗೆ ಅಕ್ಷತೆ ಇಡಿ. ಇದು ಆತನಿಗೆ ಗುಡ್‌ಲಕ್‌ ನೀಡುತ್ತದೆ. ನಂತರ ದೀಪದಿಂದ ಆರತಿ ಮಾಡಿ. ಆನಂತರ ರಾಖಿಯನ್ನು ಆತನ ಬಲಗೈಗೆ ಕಟ್ಟಿ ಸಿಹಿ ತಿನ್ನಿಸಿ. ನಿಮ್ಮ ಸಹೋದರ ಗಿಫ್ಟ್‌ ನೀಡಿದರೆ ಅಥವಾ ಏನನ್ನೇ ನೀಡಿದರೂ ಪ್ರೀತಿಯಿಂದ ಸ್ವೀಕರಿಸಿ ಸಂತಸ ಪಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !