ಸಂಜೆ ವೇಳೆ ಏನಾದ್ರೂ ಖಾರವಾಗಿ, ಹೋಟೆಲ್ ಶೈಲಿಯಲ್ಲಿ ಚಟಪಟ ಅಂತ ತಿನ್ನೋಕೆ ಮನಸ್ಸಾದ್ರೆ ಹೊರಗಡೆ ಹೋಗಿ ದುಡ್ಡು ವೇಸ್ಟ್ ಮಾಡಬೇಡಿ. ಮನೆಯಲ್ಲೇ ಇರೋ ಮೊಟ್ಟೆ ಬಳಸಿ, ಬಿಸಿಬಿಸಿಯಾಗಿ ಎಗ್ ಮಂಚೂರಿ ಮಾಡ್ಕೊಂಡು ತಿನ್ನಿ.
ಬೇಯಿಸಿದ ಮೊಟ್ಟೆ – 4
ಮೈದಾ ಹಿಟ್ಟು
ಕಾರ್ನ್‌ಫ್ಲೋರ್
ಖಾರದ ಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಕ್ಯಾಪ್ಸಿಕಂ
ಬೆಳ್ಳುಳ್ಳಿ
ಗ್ರೀನ್ ಚಿಲ್ಲಿ ಸಾಸ್
ಟೊಮೆಟೊ ಸಾಸ್
ಸೋಯಾ ಸಾಸ್
ಉಪ್ಪು & ಅಡುಗೆ ಎಣ್ಣೆ
ಕೊತ್ತಂಬರಿ ಸೊಪ್ಪು
4 ಮೊಟ್ಟೆಗಳನ್ನು ಬೇಯಿಸಿ, ಸಿಪ್ಪೆ ಸುಲಿದು ನಿಮಗೆ ಬೇಕಾದ ಸೈಜ್‌ಗೆ ಕಟ್ ಮಾಡಿ ಇಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಮೈದಾ, ಕಾನ್ ಫ್ಲೋರ್, ಖಾರದ ಪುಡಿ, ಪೆಪ್ಪರ್, ಉಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಗಂಟಿಲ್ಲದಂತೆ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲಸಿಕೊಳ್ಳಿ.
ಕಟ್ ಮಾಡಿದ ಮೊಟ್ಟೆಗಳನ್ನು ಈ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋವರೆಗೂ ಚೆನ್ನಾಗಿ ಫ್ರೈ ಮಾಡಿ ಪಕ್ಕಕ್ಕೆ ಇಡಿ. ಈಗ ಇನ್ನೊಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ 1-2 ನಿಮಿಷ ಹುರಿಯಿರಿ. ಈಗ ಸೋಯಾ ಸಾಸ್, ಚಿಲ್ಲೀ ಸಾಸ್, ಟೊಮೆಟೊ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
ಎಲ್ಲಾ ಚೆನ್ನಾಗಿ ಕುದಿ ಬಂದ ಮೇಲೆ, ಫ್ರೈ ಮಾಡಿಟ್ಟಿರೋ ಮೊಟ್ಟೆಗಳನ್ನು ಹಾಕಿ ಸಾಸ್ ಎಲ್ಲಾ ಮೊಟ್ಟೆಗೆ ಕವರ್ ಆಗೋ ತರ ಮಿಕ್ಸ್ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ, ಘಮಘಮಿಸುವ, ನಾಲಿಗೆಯಲ್ಲಿ ನೀರೂರಿಸುವ ಎಗ್ ಮಂಚೂರಿ ರೆಡಿ!



