September 1, 2026
Tuesday, September 1, 2026
spot_img

ಸೆಪ್ಟೆಂಬರ್‌ ಮೊದಲ ದಿನವೇ ಗ್ರಾಹಕರಿಗೆ ಬಿಗ್‌ ಶಾಕ್‌: ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ದರ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೆಪ್ಟೆಂಬರ್‌ ತಿಂಗಳ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದ್ದು, ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 9.50 ರೂ. ಏರಿಕೆಯಾಗಿದೆ. ದರ ಹೆಚ್ಚಳದ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ಬೆಳ್ಳಂಬೆಳಗ್ಗೆಯೇ ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಶಾಕ್‌ ನೀಡಿವೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಮಾಹಿತಿಯ ಪ್ರಕಾರ, ಕಮರ್ಷಿಯಲ್‌ ಸಿಲಿಂಡರ್‌ ದರದಲ್ಲಿ 9.50 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆದಾರರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಸದ್ಯ 14 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ, ಜೊತೆಗೆ 5 ಕೆಜಿ, 10 ಕೆಜಿ ಸಿಲಿಂಡರ್‌ ಬೆಲೆಯಲ್ಲೂ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.

ಯಾವ ನಗರಗಳಲ್ಲಿ ಎಷ್ಟಿದೆ 19 ಕೆಜಿ ವಾಣಿಜ್ಯ ಸಿಲಿಂಡರ್‌ ದರ?

ದೆಹಲಿ – 2,747.50 ರೂ.
ನೋಯ್ಡಾ – 2,747.50 ರೂ.
ಮುಂಬೈ- 2,701 ರೂ.
ಕೋಲ್ಕತ್ತಾ – 2,982 ರೂ.
ಚೆನ್ನೈ – 2,916.50 ರೂ.
ಬೆಂಗಳೂರು-2,747.50 ರೂ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !