September 1, 2026
Tuesday, September 1, 2026
spot_img

ಆಕಾಶದಲ್ಲಿ ಕೈಕೊಟ್ಟ ಇಂಡಿಗೋ ವಿಮಾನದ ಇಂಜಿನ್‌: ತುರ್ತು ಭೂಸ್ಪರ್ಶ ಮಾಡಿದ್ದಕ್ಕೆ ಬಚಾವ್‌ ಆದ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದರಲ್ಲಿ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಪ್ರೋಟೋಕಾಲ್‌ನಂತೆ ಪೈಲಟ್‌ ತಕ್ಷಣವೇ ವಿಮಾನವನ್ನು ಗೋವಾದ ಮನೋಹರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ್ದಾರೆ.

ಸಂಭವಿಸಬಹುದಾದ ದೊಡ್ಡ ದುರಂತವೊಂದು ತಪ್ಪಿದಂತಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಗೋವಾದಿಂದ ಟೇಕಾಫ್‌ ಆಗುವ ಮುನ್ನ ಎಲ್ಲ ಚೆಕಿಂಗ್‌ ಮಾಡಲಾಗಿತ್ತು. ಟೇಕಾಫ್‌ ಆಗಿ ಮೇಲೆ ಹೋಗುತ್ತಿದ್ದಂತೆಯೇ ಒಂದು ಇಂಜಿನ್‌ ತಕ್ಷಣ ಆಫ್‌ ಆಗಿದೆ. ಆಗ ಪೈಲಟ್‌ ಯೂಟರ್ನ್‌ ಮಾಡಿ ಎಮರ್ಜೆನ್ಸಿ ಲ್ಯಾಂಡಿಗ್‌ ಮಾಡಿದ್ದಾರೆ.

ಇಂಡಿಗೋ ವಿಮಾನ 6E 2102 ಟೇಕಾಫ್‌ ಆದ ಬಳಿಕ ತಾಂತ್ರಿಕ ಸಮಸ್ಯೆ ಪತ್ತೆಯಾದ ಹಿನ್ನೆಲೆ ಪೈಲಟ್‌ಗಳು ತಕ್ಷಣವೇ ಪ್ರಮಾಣಿತ ಕಾರ್ಯಾಚರಣಾ ಕ್ರಮವನ್ನು ಅನುಸರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನ ಹಿಂದಕ್ಕೆ ತಿರುಗಿಸಿ ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.

ಸದ್ಯ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇಂಜಿನ್‌ ದೋಷ ಸರಿಪಡಿಸಿ ಎಲ್ಲ ರೀತಿಯ ಅನುಮತಿಗಳನ್ನು ಪಡೆದ ನಂತರ ಮತ್ತೆ ಈ ಫ್ಲೈಟ್‌ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆ, ಪ್ರಯಾಣಿಕರಿಗೆ ಉಪಾಹಾರ ಸೇರಿದಂತೆ ಅಗತ್ಯ ನೆರವು ಒದಗಿಸಲಾಗಿದೆ ಮತ್ತು ಸಮಯೋಚಿತ ಮಾಹಿತಿಯನ್ನು ನೀಡಲಾಗಿದೆ. ಪ್ರಯಾಣಿಕರು ತಮ್ಮ ನಿಗದಿತ ಸ್ಥಾನ ತಲುಪಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !