September 3, 2026
Thursday, September 3, 2026
spot_img

ಆಫೀಸ್ ಪ್ರೆಶರ್ ಗೆ Gen Z ಮಾಸ್ಟರ್ ಪ್ಲಾನ್: ಟ್ರಯಲ್ ರೂಮ್, ಥಿಯೇಟರ್‌ಗಳೇ ಈಗ ಹೊಸ ರಿಲ್ಯಾಕ್ಸ್ ಸ್ಪಾಟ್!

ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಆಫೀಸುಗಳಲ್ಲಿ ಕೆಲಸ ಮಾಡೋ Gen Z ಯುವಪಡೆ ಒಂದಲ್ಲ ಒಂದು ವಿಚಿತ್ರ ಐಡಿಯಾಗಳಿಂದ ಸುದ್ದಿಯಲ್ಲಿ ಇರುತ್ತೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸದ ಪ್ರೆಶರ್, ಬಾಸ್ ಕಿರಿಕಿರಿ ಮತ್ತು ಡೆಡ್‌ಲೈನ್‌ಗಳ ಟೆನ್ಷನ್ ತಡೆಯೋಕೆ ಆಗದೇ ಈ ಯುವಕರು ಈಗ ಹೊಸದೊಂದು ದಾರಿ ಹುಡುಕಿಕೊಂಡಿದ್ದಾರೆ. ಆಫೀಸ್‌ನ ಟೆನ್ಷನ್‌ನಿಂದ ಸ್ವಲ್ಪ ಹೊತ್ತು ಎಸ್ಕೇಪ್ ಆಗೋಕೆ ಇವರೆಲ್ಲ ಮಾಲ್‌ಗಳಲ್ಲಿರೋ ಸಿನಿಮಾ ಹಾಲ್‌ಗಳು ಹಾಗೂ ಡ್ರೆಸ್ ಚೇಂಜ್ ಮಾಡೋ ಟ್ರಯಲ್ ರೂಮ್‌ಗಳ ಕಡೆ ಮುಖ ಮಾಡ್ತಿದ್ದಾರಂತೆ.

ಕೇಳೋಕೆ ಸ್ವಲ್ಪ ವಿಚಿತ್ರ ಎನಿಸಿದರೂ ಇದು ನೂರಕ್ಕೆ ನೂರು ಸತ್ಯ. ಕೆಲಸದ ನಡುವೆ ಸಿಗೋ ಸಣ್ಣ ಬ್ರೇಕ್‌ನಲ್ಲಿ ಮಾಲ್‌ಗಳಿಗೆ ಹೋಗಿ ಟ್ರಯಲ್ ರೂಮ್‌ನೊಳಗೆ ಕುಳಿತು ಶಾಂತವಾಗಿ ಉಸಿರಾಡುವುದು, ಪ್ರೈವೇಟ್ ಸ್ಪೇಸ್‌ನಲ್ಲಿ ಫೋನ್ ನೋಡುವುದು ಅಥವಾ ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಇವರ ದಿನಚರಿಯಾಗಿದೆ. ಇನ್ನು ಕೆಲವರಂತೂ ಆಫೀಸ್ ಹತ್ತಿರದ ಥಿಯೇಟರ್‌ಗಳಿಗೆ ಹೋಗಿ ಒಂದೆರಡು ಗಂಟೆಗಳ ಕಾಲ ಹೊರ ಜಗತ್ತಿನ ಕಾಂಟ್ಯಾಕ್ಟ್ ಇಲ್ಲದೆ ಎಸಿ ಗಾಳಿ ಸೇವಿಸುತ್ತಾ ಪೀಸ್‌ಫುಲ್ ಆಗಿ ರಿಲ್ಯಾಕ್ಸ್ ಆಗಿ ಬರುತ್ತಾರೆ. ಇದನ್ನ ಇವರು ತಮ್ಮ ಮೆಂಟಲ್ ಹೆಲ್ತ್ ಕಾಪಾಡಿಕೊಳ್ಳೋಕೆ ಮಾಡ್ತಿರೋ ‘ಮೈಕ್ರೋ-ಎಸ್ಕೇಪ್’ ಎಂದು ಕರೆದುಕೊಳ್ಳುತ್ತಿದ್ದಾರೆ.

ಹಿಂದಿನ ತಲೆಮಾರಿನವರು ಆಫೀಸ್ ಟೆನ್ಷನ್ ಕಡಿಮೆ ಮಾಡಿಕೊಳ್ಳೋಕೆ ಸಿಗರೇಟ್ ಬ್ರೇಕ್ ಅಥವಾ ಟೀ ಬ್ರೇಕ್ ಅಂತ ಹೊರಗಡೆ ಹೋಗುತ್ತಿದ್ದರು. ಆದರೆ ಇಂದಿನ ಯುವಪಡೆಗೆ ಪ್ರೈವಸಿ ಮತ್ತು ಮಾನಸಿಕ ಶಾಂತಿ ತುಂಬಾನೇ ಮುಖ್ಯವಾಗಿದೆ. ಆಫೀಸ್‌ನ ನಾಲ್ಕು ಗೋಡೆಗಳ ಮಧ್ಯೆ ಸಿಗದ ಆ ಶಾಂತಿ, ಬಟ್ಟೆ ಅಂಗಡಿಯ ಫಿಟ್ಟಿಂಗ್ ರೂಮ್‌ಗಳಲ್ಲಿ ಅಥವಾ ಕತ್ತಲ ಸಿನಿಮಾ ಹಾಲ್‌ನಲ್ಲಿ ಸಿಗುತ್ತೆ ಅನ್ನೋದು ಇವರ ವಾದ.

ದಿನಪೂರ್ತಿ ಕೆಲಸ ಮಾಡಿ ಬರ್ನ್‌ಔಟ್ ಆಗೋದಕ್ಕಿಂತ ಹೀಗೆ ಅರ್ಧ ಗಂಟೆ ಎಸ್ಕೇಪ್ ಆಗಿ ಬಂದರೆ ಮೈಂಡ್ ಫ್ರೆಶ್ ಆಗಿ ಮತ್ತೆ ಕೆಲಸ ಮಾಡಬಹುದು ಎನ್ನುತ್ತಾರೆ ಈ ಹೊಸ ಜನರೇಷನ್ ಉದ್ಯೋಗಿಗಳು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !