ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಮದ್ದೂರಿನ ಕೆ.ಎಂ. ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದಲ್ಲಿ ನಡೆದಿದೆ. ಒಂಬತ್ತು ವರ್ಷದ ಬಾಲಕಿ ವಿದ್ಯಾಶ್ರೀ ಮೃತ ದುರ್ದೈವಿ.
ಮೂರನೇ ತರಗತಿ ಬಾಲಕಿ ವಿದ್ಯಾಶ್ರೀ ಓದಿನಲ್ಲಿ ಚುರುಕು. ಇಡೀ ಮನೆಗೆ ಮುದ್ದಿನ ಮಗಳು, ಇಡೀ ಹಳ್ಳಿಯಲ್ಲಿ ಈಕೆ ಗೊತ್ತಿಲ್ಲದವರಿಲ್ಲ. ವಿದ್ಯಾಶ್ರೀಯಂತಹ ಪುಟ್ಟ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಯಾರೂ ಜೀರ್ಣಿಸಿಕೊಳ್ಳೋದಕ್ಕೆ ಸಾಧ್ಯವಾಗಿಲ್ಲ.
ಬಾಲಕಿ ಸಾವಿಗೆ ಕಾರಣ ಏನು?
ಮನೆಯಲ್ಲಿಯೂ ಎಲ್ಲರ ಪ್ರೀತಿಪಾತ್ರಳಾಗಿದ್ದ ವಿದ್ಯಾ ಶಾಲೆಯಲ್ಲೂ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ಹೀಗಿರುವಾಗ ಈಕೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದು ಯಾಕೆ? ಇಷ್ಟು ಪುಟ್ಟ ಕಂದನಿಗೆ ಆತ್ಮಹತ್ಯೆಯ ಬಗ್ಗೆ ಇಷ್ಟೊಂದು ಮಾಹಿತಿ ಏಕಿತ್ತು ಎನ್ನುವುದಕ್ಕೆ ಉತ್ತರವೇ ಇಲ್ಲದಂತಾಗಿದೆ. ಮೃತ ಬಾಲಕಿಯ ತಾಯಿ ಮಗಳ ಸಾವಿಗೆ ಟೀಚರ್ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



